ಮಂಗಳೂರು : ನಗರದ ಕಾರ್ ಮಾಡಿಫಿಕೇಷನ್ ಸೆಂಟರ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಫಳ್ನೀರ್ ಬಳಿಯ ಟೋಪಾಜ್ ಕಾರ್ ಸೆಂಟರ್ ನಲ್ಲಿ ಈ ದುರ್ಘಟನೆ ನಡೆದಿದೆ.


2 ಬಿ.ಎಂ.ಡಬ್ಲ್ಯು ಕಾರಿಗೆ ಹಾನಿಯಾಗಿದ್ದು, ಅಪಾರ ಸ್ವತ್ತು ನಾಶವಾಗಿದೆ. ಮಾಜಿ ಶಾಸಕ ಮೊಯ್ದೀನ್ ಬಾವ ತಂಗಿ ಮಗ ಸಿಯಾಜ್ ಗೆ ಸೇರಿದ ಸಂಸ್ಥೆ ಇದಾಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ

