ಕಾಸರಗೋಡು : ಕನ್ನಡ ಭವನ ಸೀತಮ್ಮ ಪುರುಷನಾಯಕ ಮಾತಾಪಿತ್ರುಗಳ ಮೊಮ್ಮಗ ಗೊಪೇಶ್ ನಾಯಕ್ -ನವವಧು ಡಾ.ಶಿಲ್ಪಾ ಮಲ್ಲಿಕ್ ಇವರಿಗೆ ಕನ್ನಡ ಭವನ ಗ್ರಂಥಾಲಯದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ಕನ್ನಡ ಭವನದ ಗೌರವ ಅಧ್ಯಕ್ಷರಾದ ಪತ್ರಕರ್ತ ಶ್ರೀ ಪ್ರದೀಪ್ ಬೇಕಲ್ ಅದ್ಯಕ್ಷತೆಯಲ್ಲಿ ನಡೆಯಿತು.
ನಗರದ ಬಿ.ಇ.ಎಮ್ ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶ್ರೀ ರಾಜೇಶ್ ಚಂದ್ರ ಕೆ.ಪಿ, ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ದಯಾವತಿ ರಾಜೇಶ್ ಚಂದ್ರ ಮುಖ್ಯ ಅತಿಥಿಗಳಾಗಿದ್ದರು. ಪೊಲೀಸ್ ಇಲಾಖೆ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್, ಪಾಂಗೋಡು ಕ್ಷೇತ್ರ ವ್ಯವಸ್ಥಾಪಕ ನವೀನ್ ನಾಯಕ್ ಪಾಂಗೋಡು, ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ, ಸಂಘಟನಾ ಕಾರ್ಯದರ್ಶಿಗಳಾದ ರಾಜೇಶ್ ಕೋಟೆಕಣಿ, ಪ್ರದೀಪ್ ನಾಯಕ್ ನಾಗರಕಟ್ಟೆ, ಕನ್ನಡ ಭವನ ಮಹಿಳಾ ಸಂಘ ಕಾರ್ಯದರ್ಶಿ ದಿವ್ಯಶ್ರೀ ಕೆರೆಮನೆ ಉಪಸ್ಥಿತರಿದ್ದರು ಕನ್ನಡ ಭವನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಕನ್ನಡ ಭವನ ಗ್ರಂಥಾಲಯದ ಪೋಷಕ ಸದಸ್ಯರಾದ ಗೊಪೇಶ್ ನಾಯಕ್ -ಡಾ. ಶಿಲ್ಪಾ ಮಲ್ಲಿಕ್ ನವವಧು ವರರಿಗೆ ಹೃದ್ಯ ಗೌರವ ಸನ್ಮಾನ ನೀಡಿ ಗೌರವಿಸಿ ನೂರ್ಕಾಲ ಸುಮಂಗಲಿಯಾಗಿ ಬಾಳಿರೆಂದು ಹರಸಿದರು.
ಕನ್ನಡ ಭವನದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲ್ ನಾಯಕ್ ಸ್ವಾಗತಿಸಿ, ವಸಂತ್ ಕೆರೆಮನೆ ವಂದಿಸಿದರು. ಚೈತಾಲಿ, ಮನೀಶ್ ಪ್ರಾರ್ಥನೆ ಹಾಡಿದರು. ಕನ್ನಡ ಭವನ ಉಪಾಧ್ಯಕ್ಷ ನವೀನ್ ಚಂದ್ರ ಅನಂಗೂರ್ ಕಾರ್ಯಕ್ರಮ ನಿರ್ವಹಿಸಿದರು.

