ಮಂಗಳೂರು : ಇಂದು ಬೆಳಿಗ್ಗೆ ಅಚಾನಕ್ ಆಗಿ ಸುರಿದ ಧಾರಾಕಾರ ಮಳೆಯಿಂದಾಗಿ ಮಂಗಳೂರಿನ ಅತ್ತಾವರ ಪ್ರದೇಶದ ಅಯಪ್ಪ ಮಂದಿರದ ಬಳಿಯ ವರ್ಷದ ಹಿಂದೆಯಷ್ಟೇ ನಿರ್ಮಿಸಲಾದ ತಡೆಗೋಡೆ ಕುಸಿದು ಬಿದ್ದ ಕಾರಣ 5 ಕಾರುಗಳು ಜಖಂಗೊಂಡಿವೆ.
ಕಾರಿನ ಬಾನೆಟ್ ಮೇಲೆ ಕಲ್ಲು ಮಣ್ಣು ಉರುಳಿದ್ದರಿಂದ ಕೆಲವು ಕಾರುಗಳ ಬಾನೆಟ್ ಹಾನಿಯಾಗಿದೆ. ಅದ್ರಷ್ಟವಶಾತ್ ಈ ಘಟನೆಯ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
ಮತ್ತೊಂದೆಡೆ ನ್ಯೂ ಚಿತ್ರ ಟಾಕೀಸ್ ಬಳಿಯ ಬಸವನಗುಡಿ ಸಮೀಪದ ಚಮ್ಮಾರ ಗಲ್ಲಿಯಲ್ಲಿ ಆಶ್ವಥ ಕಟ್ಟೆಯ ಮರದ ಕೊಂಬೆಯೊಂದು ಮುರಿದು ಬಿದ್ದು ಎರಡು ಮನೆಗಳ ಮೇಲ್ಚಾವಣಿ ಹಾನಿಯಾಗಿದೆ ಹಾಗೂ ಅಶ್ವಥಕಟ್ಟೆ ಬಳಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ ,ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

