ಮಂಗಳೂರು:ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಶನ್ ಮಂಗಳೂರು ಆಶ್ರಯದಲ್ಲಿ ನಿರ್ಮಿಸ ಲಾದ 14ನೇ ಮತ್ತು 15ನೇ ಮನೆ ಹಸ್ತಾಂತರ ಕಾರ್ಯಕ್ರಮ ‘ಸೇವಾ ಸಂಭ್ರಮ’ ಬಂಟ್ವಾಳ ಬ್ರಹ್ಮರಕೂಟು ಪಂಬದಬೆಟ್ಟು, ಕ್ರೀಡಾಂಗಣದಲ್ಲಿ ಏ.25ರಂದು ಸಂಜೆ
6 ರಿಂದ ನಡೆಯಲಿದೆ.ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಿನಿಮಾ ಕ್ಷೇತ್ರದ ದಿಗ್ಗಜರು ಭಾಗವಹಿಸಲಿದ್ದಾರೆ ಎಂದು ನಂದಾದೀಪ ಫೌಂಡೇಶನ್ನ ಅಧ್ಯಕ್ಷರಾದ ಸದಾನಂದ ಪೂಜಾರಿ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾತ್ರಿ 8 ರಿಂದ ನಡೆಯುವ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಪ್ರಕಾಶ್ ಮಹಾದೇವನ್, ರೂಪಾ ಪ್ರಕಾಶ್, ಸಮೀರ್ ಮುಡಿಪು, ಸುಪ್ರೀಯಾ ರಾಮ್, ಮೈಮ್ ರಾಮ್ ದಾಸ್, ಅನೀಶ್ ವೇಣೂರು, ಪಲ್ಲವಿ ಪ್ರಭು, ಅನುರಾಗ್ ಬಂಗೇರ, ಪಲ್ಲವಿ ದೇವಾಡಿಗ, ಶನೀಲ್ ಗೌತಮ್,ಜೆ.ಪಿ. ತೂಮಿನಾಡು, ಪುಷ್ಪರಾಜ್, ಬೊಳ್ಳಾರ್, ಪೃಥ್ವಿ ಅಂಬರ್,
ಮಂಜು ರೈ ಮುಳೂರು, ವಿನೀತ್ ಕುಮಾರ್, ನಿತ್ಯಪ್ರಕಾಶ್, ವಿಜೆತ್ ಕೋಟ್ಯಾನ್, ನಿರೀಕ್ಷಾ ಶೆಟ್ಟಿ, ಸಮತಾ ಅಮೀನ್, ವೆನ್ಸಿಟಾ ಡಯಾಸ್, ಅದ್ವಿತಿ ಶೆಟ್ಟಿ ಭಾಗವಹಿಸುವರು ಎಂದರು.
ಬಿಲ್ಲವ ಬ್ರಿಗೇಡ್ ಸಮಾಜದ ಧ್ವನಿಯಾಗಬೇಕು, ಸಮಾಜದ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬ ನಿಟ್ಟಿನಲ್ಲಿ 2019ರಲ್ಲಿ ಆರಂಭವಾಯಿತು.ಸುಮಾರು 7 ವರ್ಷಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಈ ಸಂಘಟನೆ ಕೇವಲ 3ವರ್ಷದಲ್ಲಿ 15 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದೆ. ಸುಮಾರು 25ಕ್ಕೂ ಅಧಿಕ ಅರ್ಧ ನಿರ್ಮಾಣವಾದ ಮನೆಗಳನ್ನು ಪೂರ್ಣಗೊಳಿಸಲು ಸಹಕಾರ ನೀಡಲಾಗಿದೆ. ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಜಿಪ ಮೂಡ ಬಾಲಗಣಪತಿ
ದೇವಸ್ಥಾನದ ಮೊಕ್ತೇಸರ ಯಶವಂತ ದೇರಾಜೆ, ನಾರಾಯಣ ಗುರು ಯುವವೇದಿಕೆ ಸ್ಥಾಪಕಾಧ್ಯಕ್ಷ ಸುಧಾಕರ ಕರ್ಕೇರ, ಬಿಲ್ಲವ ಬ್ರಿಗೇಡ್ ಸ್ಥಾಪಕ ಸದಸ್ಯರಾದ ಅನ್ವಿತ್ ಕಟೀಲು, ಪ್ರಶಾಂತ್ ಮಂಗಳಾದೇವಿ, ಬಿಲ್ಲವ ಬ್ರಿಗೇಡ್ ಕಾರ್ಯಾಧ್ಯಕ್ಷ ನಿಶಾನ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

