ಮಂಗಳೂರು : ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರದ ಬಂದರು ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಗರದ ಬಂದರು ಅನ್ಸಾರಿ ರಸ್ತೆಯ ನಿವಾಸಿ, ಪ್ರಸಕ್ತ ಕುಲಶೇಖರದ ಬಾಡಿಗೆ ಫ್ಲಾಟ್ ಯೊಂದರಲ್ಲಿ ವಾಸವಾಗಿದ್ದ ಮುನೀರ್ ಅಹಮ್ಮದ್ (59) ಬಂಧಿತ ಆರೋಪಿ ಆಗಿದ್ದಾನೆ.
1998ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಕಳೆದ 2 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದರಿಂದ ಈ ಬಗ್ಗೆ ಮಾನ್ಯ ನ್ಯಾಯಾಲಯವು ಆರೋಪಿಯ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು.
ಆರೋಪಿಯ ಪತ್ತೆಯ ಬಗ್ಗೆ ಶ್ರೀ ರವೀಶ್ ನಾಯಕ್, ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪವಿಭಾಗ ಮಂಗಳೂರು ನಗರ ಇವರ ನಿರ್ದೇಶನದಂತೆ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಚಿನ್ ಕುಮಾರ್ ರವರ ನೇತ್ರತ್ವದಲ್ಲಿ ಉತ್ತರ ಪೊಲೀಸ್ ಠಾಣಾ ಪಿಎಸ್ಐ ಫೈಜುನ್ನಿಸಾ ಮತ್ತು ಸಿಬ್ಬಂದಿಗಳಾದ ಹೆಚ್ ಸಿ, ಮದನ್ ಮಹೆಚ್ಸಿ, ಗೀತಾ ಶಂಕರಪ್ಪ ಹೆಚ್.ಸಿ, ಮೊದಲಾದವರು ಶನಿವಾರ ಕುಲಶೇಖರದಲ್ಲಿರುವ ಆತನ ಬಾಡಿಗೆ ಮನೆಯಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ..

