ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಸ್ಪಷ್ಟ ಬಹುಮತ ಸಾಧಿಸಿದ ನಂತರ 11ದಿನಗಳ ಕಾಲ ನಡೆದ ತೀವ್ರ ರಾಜಕೀಯ ನಾಟಕಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಿದೆ. ದೆಹಲಿಯಲ್ಲಿ ಎಐಸಿಸಿ ನಾಯಕರು ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರ ಸಮ್ಮುಖದಲ್ಲಿ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.

ಕೆ.ಸಿ. ವೇಣುಗೋಪಾಲ್ ಮತ್ತು ವಿ.ಡಿ. ಸತೀಶನ್ ನಡುವಿನ ಪೈಪೋಟಿ ತೀವ್ರವಾಗಿತ್ತು. ವಿಪಕ್ಷ ನಾಯಕರಾಗಿ ಪಕ್ಷವನ್ನು ಸಂಘಟಿಸಿ, ಚುನಾವಣೆಯಲ್ಲಿ ಯುಡಿಎಫ್ಗೆ ಜಯ ತಂದುಕೊಟ್ಟ ಸತೀಶನ್ ಅವರು ಕೊನೆಗೂ ಸಿಎಂ ಪಟ್ಟಿದ್ದಾರೆ. ರಾಹುಲ್ ಗಾಂಧಿ ಅವರು ವೇಣುಗೋಪಾಲ್ ಅವರ ಪರ ನಿಂತಿದ್ದರೂ, ಅಂತಿಮವಾಗಿ ಸತೀಶನ್ ಅವರಿಗೆ ಬೆಂಬಲ ಸಿಕ್ಕಿದೆ.
ಕೆ.ಸಿ. ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಅವರು ನಿಕಟ ಸಂಬಂಧ ಹೊಂದಿದ್ದರು, ಅನೇಕ ಶಾಸಕರ ಬೆಂಬಲ ಹೊಂದಿದ್ದರು. ಆದರೆ ಸತೀಶನ್ ಅವರು ಯುಡಿಎಫ್ ಮಿತ್ರಪಕ್ಷಗಳ ಬಲವಾದ ಬೆಂಬಲವನ್ನು ಪಡೆದಿದ್ದರು. ಪರವೂರ್ ಕ್ಷೇತ್ರದಿಂದ ಆರನೇ ಬಾರಿ ಗೆದ್ದ ಸತೀಶನ್ ಅವರು ವಕೀಲರಾಗಿದ್ದರು, ದೀರ್ಘಕಾಲದ ಸಂಘಟನಾ ಅನುಭವ. 11 ದಿನಗಳ ಕಾಲ ನಡೆದ ಚರ್ಚೆಗಳ ನಂತರ ಹೈಕಮಾಂಡ್ ಅಳೆದುತೂಗಿ ಸತೀಶನ್ ಅವರನ್ನು ಆಯ್ಕೆ ಮಾಡಲಾಗಿದೆ.

ಕೇರಳ ಕಾಂಗ್ರೆಸ್ನಲ್ಲಿ ಈ ನಿರ್ಧಾರವು ಸಂತೋಷದ ವಾತಾವರಣವನ್ನು ಸೃಷ್ಟಿಸಿದೆ. ಸತೀಶನ್ ಅವರು “ಪಕ್ಷದ ಏಕತೆಯೊಂದಿಗೆ ಕೇರಳದ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ” ಎಂದು ಹೇಳಿದರು. ಯುಡಿಎಫ್ನ 102 ಸೀಟುಗಳು ಬಹುಮತದೊಂದಿಗೆ ಸರ್ಕಾರ ರಚನೆಯ ಸಿದ್ಧತೆಗಳು ಪ್ರಾರಂಭವಾಗಿವೆ.

