ಮಂಗಳೂರು : ಕನ್ನಡ ಟೆಲಿಫಿಲ್ಮ್ “ಮೋನಾಲಿಸಾ – ಇಸ್ ಇನ್ ಟ್ರಬಲ್” ಚಿತ್ರದ ಪ್ರೀಮಿಯರ್ ಪ್ರದರ್ಶನವು ಮೇ 15, 16 ಹಾಗೂ 17ರಂದು ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ನ್ಯಾಯವಾದಿ ನವೀನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪ್ರತಿಭೆಗಳ ತಂಡದ ಮೂಲಕ ಈ ಟೆಲಿಫಿಲ್ಮ್ ನಿರ್ಮಾಣವಾಗುತ್ತಿದ್ದು, ಸಮಾಜದಲ್ಲಿ ನಡೆಯುತ್ತಿರುವ ಗಂಭೀರ ಸಮಸ್ಯೆಗಳನ್ನು ಮನಮುಟ್ಟುವ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಸಾಮಾಜಿಕ ಜಾಗೃತಿಯ ಅಂಶಗಳನ್ನು ಒಳಗೊಂಡ ಕಥಾ ಹಂದರವಿದೆ. ಚಿತ್ರವನ್ನು ಬೃಂದಾವನ್ ಎನ್. ಶೆಟ್ಟಿ ರಚಿಸಿ ನಿರ್ದೇಶಿಸಿದ್ದು, ಕಥೆಯನ್ನು ಶ್ರೇಯಸ್ ಕುಮಾರ್ ಫರಂಗಿಪೇಟೆ ರಚಿಸಿದ್ದಾರೆ.
ಚಿತ್ರದಲ್ಲಿ ಕಾರ್ತಿಕ್ ವಿ. ಆರ್. ಹಾಗೂ ಯಜ್ಞೇಶ್ ಬರ್ಕೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಮಂಗಳೂರಿನ ಅನೇಕ ಪ್ರತಿಭಾವಂತ ಕಲಾವಿದರು ಮತ್ತು ತಾಂತ್ರಿಕರು ಚಿತ್ರತಂಡದಲ್ಲಿ ಭಾಗಿಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶ್ರೇಯಸ್ ಕುಮಾರ್ ಫರಂಗಿಪೇಟೆ, ಬೃಂದಾವನ್ ಎನ್. ಶೆಟ್ಟಿ, ವಿನುತಾ ಸಿ. ನಾಯಕ್, ನ್ಯಾಯವಾದಿ ಪ್ರಸಾದ್ ಪಾಲನ್, ದಿನೇಶ್ ಕೋಟ್ಯಾನ್, ಅನುರಾಧ ನಿಲಯ ಸಾವ್ಯ, ದೇವಿಪ್ರಸಾದ್ ಕೊಂಚಾಡಿ ಹಾಗೂ ಅಭಿನವ್ ಉಪಸ್ಥಿತರಿದ್ದರು.

