ಧಾರವಾಡ: ನಗರದ ಸರ್ಕಿಟ್ ಹೌಸ್ ಸಭಾಭವನದಲ್ಲಿ ಇಂದು ನಡೆದ ರಾಮ ಕ್ಷತ್ರಿಯ ಸಮಾಜದ ರಾಜ್ಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ವಧು-ವರರ ಹೊಂದಾಣಿಕೆ, ಸಮಾಜದ ಬಾಂಧವ್ಯ ವೃದ್ಧಿ ಹಾಗೂ ಸಂಘಟನಾ ಬಲವರ್ಧನೆ ಕುರಿತಂತೆ ಮಹತ್ವದ ಚರ್ಚೆಗಳು ನಡೆದವು.
ಸಭೆಯಲ್ಲಿ ರಾಮ ಕ್ಷತ್ರಿಯ ಸಮಾಜದ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಡಾ.ಕೃಷ್ಣ ಪ್ರಸಾದ್.ಕೆ ,ಡಾ. ಬಾಲಕೃಷ್ಣ ಎಸ್., ಶ್ರೀ ಶಂಕರ್ ಹೆಬ್ರಿ, ಶ್ರೀ ಶಂಕರ್ ಕುಂದಾಪುರ, ಶ್ರೀ ಎನ್.ಮಂಜುನಾಥ್ ಬೈಂದೂರು ಹಾಗೂ ಶ್ರೀ ಕೆ.ಶ್ರೀನಿವಾಸ್ ಹೆಬ್ರಿ ಭಾಗವಹಿಸಿದ್ದರು.
ಹಿಂದೂ ಕ್ಷತ್ರಿಯ ಸಮಾಜದ ಹಿರಿಯ ಮುಖಂಡರಾದ ಶ್ರೀ ಸುಧೀರ್ ಎಚ್.ಕ್ಷತ್ರಿಯ, ಪ್ರೊ. ಬಿ.ಬಿ.ಹೊರಕಡ್ಲಿ, ಶ್ರೀ ಸುಭಾಷ್ ಹಲಗತ್ತಿ, ಶ್ರೀ ವೈ.ಆರ್.ನಾಮದಾರ, ಶ್ರೀ ಶಾಮ್ ಕಾದ್ರೊಳ್ಳಿ, ಶ್ರೀ ವಿಜಯ ಕ್ಷತ್ರಿಯ, ಡಾ.ಪ್ರಕಾಶ್ ಕ್ಷತ್ರಿಯ, ಶ್ರೀ ತಿಪ್ಪಣ್ಣ ಕಟ್ಟಿಮನಿ ಹಾಗೂ ಶ್ರೀ ಬಸವರಾಜ ಬಡಿಗೇರ ಉಪಸ್ಥಿತರಿದ್ದರು.
ಸಭೆಯಲ್ಲಿ ವಧು-ವರರ ಅನ್ವೇಷಣಾ ಮಾಹಿತಿ ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಿ, ಸಮಾಜದ ಯುವಜನರಿಗೆ ಸೂಕ್ತ ವೈವಾಹಿಕ ಸಂಬಂಧಗಳನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಭಿಪ್ರಾಯ ವಿನಿಮಯ ನಡೆಯಿತು. ಹಿಂದೂ ಕ್ಷತ್ರಿಯ ಹಾಗೂ ರಾಮ ಕ್ಷತ್ರಿಯ ಸಮಾಜಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾಜ ಬಂಧುಗಳು ವೈಯಕ್ತಿಕ ಮಟ್ಟದಲ್ಲಿಯೂ ಸಹಕಾರ ನೀಡಬೇಕೆಂದು ಕರೆ ನೀಡಲಾಯಿತು.
ಇದೇ ವೇಳೆ, ಶೀಘ್ರದಲ್ಲಿಯೇ ಹಿಂದೂ ಕ್ಷತ್ರಿಯ, ರಾಮ ಕ್ಷತ್ರಿಯ ಹಾಗೂ ಕೋಟೆಗಾರ ಕ್ಷತ್ರಿಯ ಸಮಾಜಗಳ ಸಹಯೋಗದಲ್ಲಿ ಬೃಹತ್ ವಧು-ವರರ ಸಮಾವೇಶವನ್ನು ಆಯೋಜಿಸುವ ಕುರಿತು ಚರ್ಚಿಸಿ, ಅದರ ರೂಪುರೇಷೆಗಳ ಬಗ್ಗೆ ಪ್ರಾಥಮಿಕ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಸಭೆಯ ಬಳಿಕ ತಿಳಿಸಲಾಯಿತು.

