ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಶಿಕ್ಷಕ ಸಮ್ಮೇಳನ ದಲ್ಲಿ ಆರ್ಯಭಟ ಚಾರಿಟೇಬಲ್ ಟ್ರಸ್ಟ್ ಬೆಳಗಾಂ (ಮುಂಬೈ ಪ್ರಾಂತ್ಯ ) ಹಾಗೂ ಚೇತನ ಫೌಂಡೇಶನ್ ಜತೆ ಕಾರ್ಯಕ್ರಮದಲ್ಲಿ ಗಡಿನಾಡು ಕಾಸರಗೋಡಿನ ಕನ್ನಡ ಭವನ ಖ್ಯಾತಿಯ ಡಾ.ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ಟೀಚರ್ ದಂಪತಿಗಳಿಗೆ, ಆದರ್ಶ ಕನ್ನಡ ದಂಪತಿಗಳು ಸರದಿಯಲ್ಲಿ ” ಆರ್ಯ ಭಟ ರಾಷ್ಟ್ರೀಯ ಪ್ರಶಸ್ತಿಯನ್ನು “ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಚಂದ್ರಶೇಖರ ಮಾಡಲಗೇರಿ, ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಸೋಸಿಯೇಟ್ ಪ್ರೊ.ಡಾ. ಬಾಲಕೃಷ್ಣ ಎಸ್.ಮದ್ದೋಡಿ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.

