ದುಬೈ : ಪ್ರತಿಷ್ಠಿತ ಸಂಸ್ಥೆಯಾದ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ಸೆಪ್ಟೆಂಬರ್ 20, 2026ರಂದು ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ಹಾಲ್ನಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ಕೆ ದುಬೈಯ ಪುಣೆ ರೆಸಿಡೆನ್ಸಿಯಲ್ಲಿ ವಿದ್ಯುತ್ವವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಸಂಧ್ಯಾ ಕ್ರಿಯೇಷನ್ಸ್ನ ಮುಖ್ಯಸ್ಥ ಶೋಧನ್ ಪ್ರಸಾದ್ ಹಾಗೂ ರಾಮಕ್ಷತ್ರಿಯ ಸಂಘ ಯುಎಇ ಉಪಾಧ್ಯಕ್ಷ ಲಕ್ಷ್ಮೀಶ್ ಚೇತನ್ ಭಾಗವಹಿಸಿ ಉತ್ಸವದ ಯಶಸ್ಸಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಮುಖ್ಯ ಸಂಚಾಲಕರಾಗಿ ಸುಗಂಧರಾಜ್ ಬೇಕಲ್ ಹಾಗೂ ಅಜಿತ್ ಕೊರಕೋಡು ಅವರನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲ್ವಿಚಾರಕರಾಗಿ ಸತೀಶ್ ಅವರನ್ನು ಹಾಗೂ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ಸ್ಮಿತಾ ಗಣೇಶ್ ರಾವ್ ಅವರನ್ನು ನೇಮಕ ಮಾಡಲಾಯಿತು.
ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಮಹೇಶ್ ಚಂದ್ರಗಿರಿ, ಉಪಾಧ್ಯಕ್ಷ ಶ್ರೀ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನಿಲ್ ರಾವ್, ಕೋಶಾಧಿಕಾರಿ ರಾಜೇಶ್ ರಾವ್ (ಪುಣೆ), ಜಂಟಿ ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್, ಕ್ರೀಡಾ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಇತರೇ ಸದಸ್ಯರು ಹಾಜರಿದ್ದರು.

