ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆಗಳ ಕಳ್ಳತನ ನಡೆದಿದೆ ಎಂಬ ಆರೋಪದಲ್ಲಿ ಕೇಂದ್ರ ಸರ್ಕಾರ ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಮತ್ತು ಪ್ರಧಾನಿ ನರೇಂದ್ರಮೋದಿ ಅವರು ದೇವಾಲಯ ನಿರ್ಮಾಣದ ಹೆಗ್ಗಳಿಕೆಯನ್ನು ಪಡೆದುಕೊಂಡಿರುವುದರಿಂದ, ಈಗ ಅವರೇ ಘಟನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಅಲ್ಲದೆ 40 ದಿನಗಳಲ್ಲಿ ರಾಮ ಮಂದಿರದಲ್ಲಿ 70 “ಕಳ್ಳತನಗಳು” ನಡೆದಿವೆ ಆದರೆ ಈ ವಿಷಯ ಬಗ್ಗೆ ಸಂಪೂರ್ಣ ಸತ್ಯ ಇನ್ನೂ ಬಹಿರಂಗಗೊಂಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರೆ ರಾಗಿಣಿ ನಾಯಕ್ ಹೇಳಿದ್ದಾರೆ,
ಬಿಜೆಪಿ ಸರ್ಕಾರ ಒತ್ತಡದ ಮೇರೆಗೆ ಎಸ್ಐಟಿ ರಚಿಸಿತು, ಆದರೆ ಅದರ ವರದಿಯನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಯಾರನ್ನು ರಕ್ಷಿಸಲಾಗುತ್ತಿದೆ?” ರಾಮ ಮಂದಿರ ನಿರ್ಮಾಣದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿತ್ತು, ಆದರೆ ಈಗ ಕಾಣಿಕೆಗಳ ಕಳ್ಳತನದ ಆರೋಪದ ಬಗ್ಗೆ ಮೌನವಾಗಿದ್ದಾರೆ ಎಂದು ನಾಯಕ್ ಆರೋಪಿಸಿದರು. “ನೀವು ಕ್ರೆಡಿಟ್ ತೆಗೆದುಕೊಂಡಿದ್ದರೆ, ಕಳ್ಳತನದ ಜವಾಬ್ದಾರಿಯನ್ನು ಸಹ ನೀವು ತೆಗೆದುಕೊಳ್ಳಬೇಕು. ಇದು ಸಾರ್ವಜನಿಕರಿಗೆ ಮಾಡಿದ ದ್ರೋಹ” ಎಂದು ಅವರು ಹೇಳಿದರು.

ಪ್ರಮುಖ ಪ್ರಕರಣಗಳಲ್ಲಿ, ಸಣ್ಣಪುಟ್ಟ ವ್ಯಕ್ತಿಗಳನ್ನು ಹೆಚ್ಚಾಗಿ ಬಂಧಿಸಲಾಗುತ್ತದೆ, ಆದರೆ “ದೊಡ್ಡ ಮೀನುಗಳು” ತಪ್ಪಿಸಿಕೊಳ್ಳುತ್ತವೆ ಎಂದು ಕಾಂಗ್ರೆಸ್ ವಕ್ತಾರೆ ಆರೋಪಿಸಿದ್ದಾರೆ. ಬಿಜೆಪಿಯೊಳಗಿನ ಕೆಲವರು ಇದನ್ನು “ವೈಯಕ್ತಿಕ ವಿಷಯ” ಎಂದು ಅದನ್ನು ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ದೇಶದ ಅತ್ಯಂತ ಬಡವರು ಮತ್ತು ಶ್ರೀಮಂತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ಇದು ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲ. ಪ್ರಧಾನಿ ಮುಂದೆ ಬಂದು ಈ ವಿಷಯದ ಬಗ್ಗೆ ಸಾರ್ವಜನಿಕರಿಗೆ ಉತ್ತರಿಸಬೇಕು” ಎಂದು ನಾಯಕ್ ಹೇಳಿದರು, ಎಸ್ಐಟಿ ವರದಿಯನ್ನು ಬಹಿರಂಗಪಡಿಸಬೇಕು ಮತ್ತು ನ್ಯಾಯಯುತ ಮತ್ತು ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಗಿಣಿ ನಾಯಕ್ ಒತ್ತಾಯಿಸಿದರು.

