ಕೊಲ್ಲಂ: ಪ್ರಾರ್ಥನೆಯ ನೆಪದಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೂರಿನ ಮೇರೆಗೆ ಕ್ರಿಶ್ಚಿಯನ್ ಪಾದ್ರಿಯೊಬ್ಬರನ್ನು ಬಂಧಿಸಲಾಗಿದೆ. ನೀಂದಕರ ಕಾರ್ಮೆಲ್ ಭವನ ಆಶ್ರಮದಲ್ಲಿ ಧರ್ಮಗುರುಗಳಾಗಿ ಕೆಲಸ ಮಾಡುತ್ತಿದ್ದ ಫಾದರ್ ಡೆನ್ನಿಸ್ ಪ್ರವೀಣ್ ಅವರನ್ನು ನೀಂದಕರ ಮೂಲದ 24 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಬಂಧನ ಮಾಡಲಾಗಿದೆ.
ಯುವ ಗುಂಪಿನ ಸದಸ್ಯೆಯಾಗಿದ್ದ ಬಾಲಕಿ ಸೆಪ್ಟೆಂಬರ್ 2022 ರಲ್ಲಿ ಚೀಲಂತಿಮುಕ್ಕುವಿನ ಪ್ರಾರ್ಥನಾ ಮಂದಿರದಲ್ಲಿ ಧ್ಯಾನ ಮಾಡಲು ಹೋದಾಗ ಪಾದ್ರಿಯು ಒಟ್ಟಿಗೆ ಪ್ರಾರ್ಥಿಸಿ ಪವಿತ್ರರಾಗಬಹುದು ಎಂದು ಹೇಳಿ ಅತ್ಯಾಚಾರ ಎಸಗಿದ್ದಾನೆ ನಂತರ ನೀಂದಕರ ಮತ್ತು ವಿಳಿಂಜಮ್ ಧ್ಯಾನ ಕೇಂದ್ರದಲ್ಲಿಯೂ ಕೂಡ ತನ್ನ ಮೇಲೆ ಪಾದ್ರಿಯು ಅತ್ಚಾಚಾರ ನಡೆಸಿದ್ದಾನೆಂದು ಬಾಲಕಿಯು ಚಾವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಇತರ ಹುಡುಗಿಯರೊಂದಿಗೆ ಕೂಡಾ ಪಾದ್ರಿಯು ಕೆಟ್ಟ ಅನುಭವಗಳನ್ನು ಹೊಂದಿದ್ದಾರೆಂದು ತಿಳಿದುಕೊಂಡ ಬಾಲಕಿಯು, ತನ್ನ ಪೋಷಕರಿಗೆ ನಡೆದ ವಿಷಯವನ್ನು ತಿಳಿಸಿದಾಗ ಬಾಲಕಿಯ ಕುಟುಂಬ ಪೊಲೀಸರಿಗೆ ದೂರು ನೀಡಿದರು, ದೂರು ದಾಖಲಾಗುತ್ತಿದ್ದಂತೆ ಆರೋಪಿ ಪಾದ್ರಿ ತಲೆಮರೆಸಿಕೊಂಡಿದ್ದ ,ನಂತರ ಪೊಲೀಸ್ ಸೈಬರ್ ಸೆಲ್ ಸಹಾಯದಿಂದ, ತಿರುವನಂತಪುರದ ಪುಲಿಂಕುಡಿಯಲ್ಲಿರುವ ಮತ್ತೊಂದು ಧ್ಯಾನ ಕೇಂದ್ರದಲ್ಲಿದ್ದಾನೆಂದು ತಿಳಿದು ಚಾವರ ಇನ್ಸ್ಪೆಕ್ಟರ್ ನೇತೃತ್ವದ ವಿಶೇಷ ತನಿಖಾ ತಂಡ ತಿರುವನಂತಪುರಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು. ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ಗೆ ಕಳುಹಿಸಲಾಯಿತು.

