ಆಲಪ್ಪುಲ: ಉಜ್ಬೇಕಿಸ್ತಾನ್ನಲ್ಲಿ ಹತ್ಯೆಗೀಡಾದ 21 ವರ್ಷ ಪ್ರಾಯದ ಕೇರಳದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಆಕೆಯ ಸಾವಿಗೆ ಮುನ್ನ ಬೇರೆ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪದೇ ಪದೇ ಒತ್ತಡ ಹೇರಲಾಗಿದೆ ಎಂದು ಆಕೆಯ ಕುಟುಂಬ ಗಂಭೀರ ಆರೋಪ ಮಾಡಿದೆ. ಕೇರಳದ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತೆಯ ಕುಟುಂಬದ ಕೋರಿಕೆಯ ಮೇರೆಗೆ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದ್ದಂತೆ ಈ ಆರೋಪಗಳು ಹೊರಬಿದ್ದಿವೆ.

ಜುಲೈ 3ರಂದು ಉಜ್ಬೇಕಿಸ್ತಾನದ ಬುಖಾರಾದಲ್ಲಿ ಬುಖಾರಾ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂಬಿಬಿಎಸ್ ಕೋರ್ಸ್ ಓದುತ್ತಿದ್ದ, ಆಲಪ್ಪುಳ ಜಿಲ್ಲೆಯ ಹರಿಪ್ಪಾಡ್ ಮೂಲದ ಸವಾರಿಯಾ ಬಸಂತ್ ತನ್ನ ಸಹ ವಿದ್ಯಾರ್ಥಿಯೊಂದಿಗೆ ನಡೆದ ವಾಗ್ವಾದದ ನಂತರ ಕೊಲ್ಲಲ್ಪಟ್ಟರು.ಆರೋಪಿ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ನ ಬಳಿಯ ಪುಲಮಂಥೋಲ್ ಮೂಲದ ಮತ್ತು ಅದೇ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ 22 ವರ್ಷದ ಸದರುಲ್ ಅನಮ್ ,ಪ್ರಸ್ತುತ ಈತ ಉಜ್ಬೇಕಿಸ್ತಾನ್ ಪೊಲೀಸರ ವಶದಲ್ಲಿದ್ದಾನೆ.

ಉಜ್ಬೇಕಿಸ್ತಾನ್ನಿಂದ ಹಿಂದಿರುಗಿದ ಸವಾರಿಯಾಳ ಚಿಕ್ಕಪ್ಪ ಜನೀಶ್, ಸವಾರಿಯಾ ಸಾಯುವ ಮೊದಲು ಕ್ರೂರ ದೈಹಿಕ ಹಲ್ಲೆಗೆ ಒಳಗಾಗಿದ್ದಳು ಎಂದು ಅಲ್ಲಿನ ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಆರೋಪಿಸಿದರು.ಸವಾರಿಯಾ ಮತ್ತು ಆರೋಪಿಯ ಸ್ನೇಹಿತರು ಸಹ ಪೊಲೀಸರಿಗೆ ತಿಳಿಸಿದ್ದು, ಸದರುಲ್ ಅನಮ್ ಸವಾರಿಯಾಳನ್ನು ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಹೇಳಿದ್ದಾರೆ ,ಆರಂಭಿಕ ವರದಿಗಳು ಸೂಚಿಸಿದಂತೆ ಇದು ಕೇವಲ ಲ್ಯಾಪ್ಟಾಪ್ನಿಂದ ನಡೆದ ದಾಳಿಯಲ್ಲ.ಇದು ಕೊಲೆ. ಇಂತಹ ಘೋರ ದಾಳಿಯ ಹಿಂದಿನ ನಿಖರವಾದ ಉದ್ದೇಶ ನಮಗೆ ಇನ್ನೂ ತಿಳಿದಿಲ್ಲ. ವಿವರವಾದ ತನಿಖೆಯಿಂದ ಮಾತ್ರ ಸತ್ಯವನ್ನು ಬಹಿರಂಗಪಡಿಸಬಹುದು,” ಎಂದು ಜನೀಶ್ ಹೇಳಿದರು, ಉಜ್ಬೇಕಿಸ್ತಾನ್ನಿಂದ ಸಂಪೂರ್ಣ ಮರಣೋತ್ತರ ದಾಖಲೆಗಳು ಮತ್ತು ಇತರ ದಾಖಲೆಗಳನ್ನು ಪಡೆಯುವುದು ಕಷ್ಟಕರವಾಗುವುದರಿಂದ ಕುಟುಂಬವು ಭಾರತದಲ್ಲಿ ಮರು ಮರಣೋತ್ತರ ಪರೀಕ್ಷೆಯನ್ನು ಕೋರಿದೆ ಎಂದು ಹೇಳಿದರು


ಸವಾರಿಯಾ ಅವರ ತಂದೆ ಬಸಂತ್ ಅವರು ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಜ್ಯದಲ್ಲಿ ಕಾನೂನು ಕ್ರಮಗಳನ್ನು ಆರಂಭಿಸಿದ್ದಾರೆ. ಗುರುವಾರ ಮುಂಜಾನೆ ಶವವನ್ನು ಕೊಚ್ಚಿಗೆ ತಂದ ನಂತರ, ಆಲಪ್ಪುಳ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮರು ಮರಣೋತ್ತರ ಪರೀಕ್ಷೆಗೂ ಮುನ್ನ ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕುಟುಂಬಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ

