ಪುತ್ತೂರು: ಇದು ಫಿಟ್ನೆಸ್, ವೈಟ್ಲಾಸ್ ಅಲ್ಲ ದೇಹದಾಡ್ಯದ ಜಿಮ್ ಕೂಡಾ ಅಲ್ಲ, ಅದರ ಬದಲಾಗಿ ಆರೋಗ್ಯ ಕ್ಷೇತ್ರಕ್ಕೆ ಹೊಸ ಕೊಡುಗೆಯಾಗಿ ಯೋಗ, ಧ್ಯಾನ, ಪ್ರಾಣಯಾಮ ಸಹಿತ ಹಲವು ಮಾರ್ಗಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಕುರಿತ ‘ ಸ್ವಾತಿ ಆಕೃತಿ ವೆಲ್ನೆಸ್’ ಎಂಬ ಸಂಸ್ಥೆಯು ಪುತ್ತೂರು ಅರುಣಾ ಕಲಾ ಮಂದಿರದ ಬಳಿಯ ಕೃಷ್ಣಪ್ರಸಾದ್ ಬಿಲ್ಡಿಂಗ್ನ 2ನೇ ಅಂತಸ್ತಿನಲ್ಲಿ ಜು.13ರಂದು ಬೆಳಿಗ್ಗೆ ಗಂಟೆ 10ಕ್ಕೆ ಉದ್ಘಾಟನೆಗೊಳ್ಳಲಿದೆ.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಮಾಲಕಿ ಯೋಗಪಟು ಉಜಿರೆ ಮೂಲದ ಸ್ವಾತಿ ಬಿ ಶೆಟ್ಟಿಯವರು ಮಾತನಾಡಿ, ಬಾಲ್ಯದಿಂದಲೇ ಯೋಗದ ಮೇಲೆ ಆಸಕ್ತಿ ಮೂಡಿದ ಹಿನ್ನೆಲೆಯಲ್ಲಿ ಅದನ್ನೇ ಮುಂದುವರಿಸಿದೆ. ಬೆಂಗಳೂರಿನಲ್ಲಿ ಹಲವು ಅನುಭವ ಪಡೆದು, ಪುತ್ತೂರಿನಲ್ಲಿ ವೈದ್ಯರ್ಸ್ ಆಸ್ಪತ್ರೆಯಲ್ಲಿ, ಮುಳಿಯ ಜಿಮ್ ಸಂಸ್ಥೆಯಲ್ಲೂ ಕೆಲಸ ಮಾಡಿದ ಅನುಭವ ಹೊಂದಿಕೊಂಡು ದೇಹದ ಆರೋಗ್ಯಕ್ಕೆ ಬೇಕಾದ ವಿಚಾರವನ್ನು ಮುಂದಿಟ್ಟು ಸಂಸ್ಥೆ ಆರಂಭಿಸಿದ್ದೇನೆ. ಸಂಸ್ಥೆಯಲ್ಲಿ ಎಲ್ಲಾ ವಯೋಮಾನದವರಿಗೂ ಅವರ ಆರೋಗ್ಯಕ್ಕೆ ತಕ್ಕಂತೆ ಯೋಗ, ಧ್ಯಾನ ಇತರ ದೈಹಿಕ ಶ್ರಮದ ತರಬೇತಿ ನೀಡಲಾಗುವುದು ಎಂದರು. ಸಂಸ್ಥೆಯ ಹಿತೈಷಿ ಡಾ. ಅನನ್ಯಲಕ್ಷ್ಮೀ ಸಂದೀಪ್ ಅವರು ಮಾತನಾಡಿ ಇತ್ತೀಚಿಗಿನ ದಿನದಲ್ಲಿ ಮಕ್ಕಳ ಮನಸ್ಸಿನ ಒತ್ತಡ ಮತ್ತು ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಸಂಸ್ಥೆಯಲ್ಲಿ ವಿಶೇಷ ತರಬೇತಿ ನೀಡಲಾಗುವುದು ಎಂದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮುಳಿಯ ಗ್ರೂಪ್ನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ, ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ, ವೈದ್ಯರ್ ಆಯುರ್ವೇದ ಆಸ್ಪತ್ರೆಯ ಮಾಲಕ ಡಾ. ಪ್ರಶಾಂತ್ ಜಾನ, ಕಟ್ಟಡದ ಮಾಲಕ ಕೆ.ಕೃಷ್ಣ ಕಾಮತ್, ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಆರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಲಕಿ ಸ್ವಾತಿ ಬಿ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ಅನನ್ಯಲಕ್ಷ್ಮೀ ಸಂದೀಪ್, ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಕೆ ಮೊಟ್ಟೆತಡ್ಕ ಉಪಸ್ಥಿತರಿದ್ದರು.

