ಲಕ್ನೋ : ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ತನ್ನ ತಾಯಿಯನ್ನು ಮದುವೆಯಾಗಲು 18 ತಿಂಗಳ ಮಗುವನ್ನು ಕೊಂದ ಆರೋಪಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ.
18 ತಿಂಗಳ ಮಗು ಆರವ್ನನ್ನು ಕೊಂದ ಪ್ರಕರಣದ ಆರೋಪಿ ವಿರಾಜ್ ಅಲಿಯಾಸ್ ಜಿತೇಂದ್ರ ಪಾಠಕ್ ಗೆ ಮರಣದಂಡನೆ ವಿಧಿಸಲಾಗಿದೆ. ಘಟನೆ ನಡೆದ 40 ದಿನಗಳಲ್ಲಿ ನ್ಯಾಯಾಲಯ ವಿಚಾರಣೆಯನ್ನು ಪೂರ್ಣಗೊಳಿಸಿ ಶಿಕ್ಷೆಯನ್ನು ಪ್ರಕಟಿಸಿದೆ.
ಮಗುವಿನ ತಾಯಿ ರತಿ ಶರ್ಮಾ (24) ಜಿತೇಂದ್ರ ಪಾಠಕ್ ಅವರ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಮತ್ತು ತನಗೆ ಈಗಾಗಲೇ ಒಬ್ಬ ಮಗನಿದ್ದಾನೆ ಮತ್ತು ಮಗುವನ್ನು ತ್ಯಜಿಸುವುದಿಲ್ಲ ಎಂದು ಹೇಳಿದ್ದರು, ಇದರಿಂದ ತನ್ನ ಸಂಬಂಧಕ್ಕೆ ಮಗು ಅಡ್ಡಿ ಎಂದು ತಿಳಿದು ಮಗುವನ್ನು ಮೇ 30 ರಂದು ಸಿಹಿತಿಂಡಿಗಳನ್ನು ಖರೀದಿಸುವ ನೆಪದಲ್ಲಿ ಮನೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ನಿರ್ಜನ ರಸ್ತೆಗೆ ಕರೆದೊಯ್ದು, ಅಲ್ಲಿ ಮಗುವನ್ನು ಪದೇ ಪದೇ ನೆಲಕ್ಕೆ ಹೊಡೆದು ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು.ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು.

ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದ ನಂತರ ಪೊಲೀಸರು ಆತನ ಕಾಲಿಗೆ ಎನ್ಕೌಂಟರ್ ಮಾಡಿ ಬಂಧಿಸಿದರು. ತ್ವರಿತ ತನಿಖೆಯ ನಂತರ, ಆರು ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು ಮತ್ತು ವಿಚಾರಣೆಯನ್ನು ಕೇವಲ 40 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ತನಿಖೆಯ ಸಮಯದಲ್ಲಿ, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ.
ಶಿಕ್ಷೆಯ ಘೋಷಣೆಗಾಗಿ ಶುಕ್ರವಾರ ಮಧ್ಯಾಹ್ನ ಭಾರೀ ಭದ್ರತೆಯಲ್ಲಿ ಜಿತೇಂದ್ರ ಪಠಾಕ್ನನ್ನು ಫಿರೋಜಾಬಾದ್ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥನೆಂದು ಘೋಷಿಸಿದ ಜಿಲ್ಲಾ ನ್ಯಾಯಾಧೀಶರು, ಅಂತಿಮ ವಾದಗಳನ್ನು ಆಲಿಸಿದ ನಂತರ ಶಿಕ್ಷೆಯನ್ನು ಪ್ರಕಟಿಸಿದರು. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಕಡೆಯಿಂದ 13 ಸಾಕ್ಷಿಗಳು ಮತ್ತು ಪ್ರತಿವಾದಿ ಕಡೆಯಿಂದ ಒಬ್ಬ ಸಾಕ್ಷಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಸಾಕ್ಷಿಗಳ ಹೇಳಿಕೆಗಳು ಮತ್ತು ವೈಜ್ಞಾನಿಕ ಪುರಾವೆಗಳು ಸೇರಿದಂತೆ ಸಾಕ್ಷ್ಯಗಳನ್ನು ಮೌಲ್ಯಮಾಪನ ಮಾಡಿದ ನಂತರ ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಿತು. .

