ಕಾಸರಗೋಡು : ಅಣoಗೂರು ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ 2027 ಫೆಬ್ರವರಿಯಲ್ಲಿ ನಡೆಯಲಿರುವ ಶ್ರೀ ದೇವಿಯ ರಜತ ಫಲಕದ ಪುನರ್ ಪ್ರತಿಷ್ಠೆ ಹಾಗೂ ಶ್ರೀ ನಾಗನ ಕಟ್ಟೆಯ ಪುನರ್ ನಿರ್ಮಾಣ ಮತ್ತು ಪ್ರತಿಷ್ಠಾ ಮಹೋತ್ಸವದ ಧನ ಸಂಗ್ರಹಗೋಸ್ಕರಕ್ಕಾಗಿ ಶ್ರೀ ಶಾರದಾ ನಿಧಿ ಎಂಬ ಲಕ್ಕಿ ಕೂಪನಿನ ಬಿಡುಗಡೆ ಎಡನೀರು ಮಠಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನೆರವೇರಿಸಿದರು
ಕೊಡುಗೈ ದಾನಿ, ಮಹೋತ್ಸ ಸಮಿತಿಯ ರಕ್ಷಾಧಿಕಾರಿ ಶ್ರೀ ವಸಂತ ಪೈ ಬದಿಯಡ್ಕ ಇವರು ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ವೇದಿಕೆಯಲ್ಲಿ ಡಾll ವಾಮನ್ ರಾವ್ ಬೇಕಲ್ ಹಾಗು ಉದ್ಯಮಿ ಶ್ರೀ ರಾಮಚಂದ್ರ ಕಾಮತ್ ಅಸೀನರಾಗಿದ್ದರು.ಸಭೆಯ ಅಧ್ಯಕ್ಷರಾಗಿ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ದಿನೇಶ್ ಇವರು ನೆರವೇರಸಿದರು ಶ್ರೀ ವೆಂಕಟೇಶ್ ಸ್ವಾಗತಿಸಿ ಸುನಿಲ್ ಶೆಟ್ಟಿ ಧನ್ಯವಾದ ಮಾಡಿದರು ಶ್ರೀ ಕಿರಣ್ ಟಿ ನಿರೂಪಿಸಿದರು.

