ಮಂಗಳೂರು : ಅಂಬುರುಹ ಯಕ್ಷ ಕಲಾ ಕೇಂದ್ರ, ಮಾಲೆಮಾರ್ ವತಿಯಿಂದ 8ನೇ ವರ್ಷದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಜುಲೈ 19ರಂದು ಮುಲ್ಲಕಾಡು, ಕಾವೂರು ಶ್ರೀ ಕೋಟದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯಲಿದೆ ಎಂದು ಕಲಾ ಸಾರಥಿ ಕುಮಾರ್ ಮಾಲೆಮಾರ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ಕುಣಿತ ಭಜನೆ, ಉಚಿತ ಜನಸೇವಾ ಶಿಬಿರ, ಮಕ್ಕಳಿಂದ ‘ಕೃಷ್ಣಲೀಲೆ’ ಯಕ್ಷಗಾನ ಹಾಗೂ ಸಂಜೆ ‘ಶಾಂಭವಿ ವಿಜಯ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಂಬುರಹ ಪ್ರಶಸ್ತಿ ಪ್ರಧಾನ ಅಲ್ಲದೆ ಎಂಟು ಬಡ ಕುಟುಂಬಗಳಿಗೆ ಉಚಿತ ದಿನಸಿ ಸಾಮಗ್ರಿ ವಿತರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯಶೋಧ, ಭಾರತಿ, ಹರಿಣಾಕ್ಷಿ, ಮಹಾಲಕ್ಷ್ಮಿ, ಮೋಕ್ಷಿತ್ ಪೂಜಾರಿ ಹಾಗೂ ಜಾನ್ವಿ ಮಾಲೆಮಾರ್ ಉಪಸ್ಥಿತರಿದ್ದರು.

