ಕಾಸರಗೋಡು, ಜು. 24: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026’ ನಡೆಯಲಿದೆ.
ಸಮ್ಮೇಳನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಾಧನೆ ಮೆರೆದ 38 ವಿದ್ಯಾರ್ಥಿಗಳಿಗೆ ಕನ್ನಡ ಭವನದ ಅಂತರ್ರಾಜ್ಯ ಪ್ರತಿಷ್ಠಿತ ‘ಭರವಸೆಯ ಬೆಳಕು (Light of Hopes) Students Achievement Award–2026’ ಪ್ರದಾನ ಮಾಡಿ ಗೌರವಿಸಲಾಗುವುದು.
ಪ್ರಶಸ್ತಿಗೆ ಆಯ್ಕೆಯಾದವರು: ತ್ರಿಷಾ ಎ. ರಾವ್, ತೇಜಸ್ ಮುದ್ದೋಡಿ, ನಿನಾದ್ ರಾವ್, ವೈಷ್ಣವಿ ಸಿ.ಎಚ್., ಮಾನ್ಯ ನುಳ್ಳಿಪಾಡಿ, ವೈಭವಿ ಎ. ಕಾಸರಗೋಡು, ಮಾನ್ಯತಾ ಪ್ರಶಾಂತ್, ಸ್ವಸ್ತಿಕಾ ಎ. ಪಾರೆಕಟ್ಟೆ, ಜೈತ್ರಶ್ರೀ ಕಾಸರಗೋಡು, ಅದಿತಿ ಬೇಕಲ್, ಶ್ರೇಯ ಜಿ.ಎಂ., ತನುಶ್ ಎಸ್. ರಾವ್ ಮುಳ್ಳಿ, ವೈಭವ್ ಬೇಕಲ್ ಟಿ., ಭೂಮಿಕಾ ಸಿ.ಎಚ್. ಚಂದ್ರಗಿರಿ, ಪ್ರಣಮ್ಯ ಎನ್. ಪುತ್ತೂರು, ಧೃತಿ ಜಿ. ಮಂಗಳೂರು, ಅಭಯ್ ವಿ. ಹೂಡೆ, ಶ್ರಿಯಾ, ಹರ್ಷಿತಾ ಕೆ. ಕೋಟೆಕಣಿ, ತನುಶ್ರೀ ಎಸ್. ಮಂಗಳೂರು, ಶ್ರೇಯಸ್ ಬೈಂದೂರು, ಪ್ರಣವಿ ಬಿ.ಕೆ. ಮಂಗಳೂರು, ಭವಿಷ್ ಆರ್.ಪಿ. ಕೋಟೆಕಾರು, ಅರ್ಪಣ್ ಕೆ., ಸಾನ್ವಿ ರಾವ್ ಮುಲ್ಕಿ, ಪೂಜಾ ಬೇಕಲ್ ವಿ., ಅನನ್ಯ ಮಂಗಳೂರು, ಚಿನ್ಮಯ್ ರಾವ್ ಪುತ್ತೂರು, ಸಂಜನ ಆರ್. ರಾವ್ ಕುಂಪಲ, ಶ್ರೇಯ ಬೈಂದೂರು, ಹರ್ಷಿತ ಕೆ.ಎಲ್. ಮಂಗಳೂರು, ಶ್ರೀನಿಧಿ ಪಡೆ, ಪ್ರಜ್ಞಾ ರಾವ್ ಎಂ. ಮಂಗಳೂರು, ಲಾವಣ್ಯ ಬಿ.ಸಿ., ಕ್ಷಿತಿಜ್, ಸಾಕ್ಷಿ, ಯಶಸ್ವಿನಿ ಹಾಗೂ ಸಾತ್ವಿಕ್ ಎಸ್. ರಾವ್.
ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಭವನ ಗ್ರಂಥಾಲಯ ಹಾಗೂ ಕನ್ನಡ ಭವನ ಪ್ರಕಾಶನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


