ಕಾಸರಗೋಡು, ಜು. 24: ದೈವ ನರ್ತನ ಹಾಗೂ ಜಾನಪದ ಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಶ್ರೀ ಲಕ್ಷ್ಮಣ ಯಾನೆ ಕಾಂತ ಅವರಿಗೆ ಅಂತರ್ರಾಜ್ಯ “ಕನ್ನಡ ಪಯಸ್ವಿನಿ – ಜಾನಪದ ರತ್ನ ಪ್ರಶಸ್ತಿ-2026” ಪ್ರದಾನ ಮಾಡಲಾಗುತ್ತಿದೆ.
ಜುಲೈ 26ರಂದು ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಖ್ಯಾತ ಕನ್ನಡ ಸಂಸ್ಥೆಯಾದ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ.ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ನಡೆಯುವ ಸಮಾರಂಭದಲ್ಲಿ ‘ಕನ್ನಡ ಪಯಸ್ವಿನಿ ಜಾನಪದ ರತ್ನ’ ಅಚೀವ್ಮೆಂಟ್ ಅವಾರ್ಡ್ ನೀಡಿ ಸನ್ಮಾನಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

