ಮಂಗಳೂರು : ತುಳು ಪರಿಷತ್ ನಿಂದ ಆಟಿಡೊಂಜಿ ಕಜ್ಜ ಕಾರ್ಯಕ್ರಮ ಭಾನುವಾರ ತಾರೀಕು 9 ಆಗಸ್ಟ್ 2026 ರಂದು ಕದ್ರಿ ಮಲ್ಲಿಕಟ್ಟೆಯ ಸುಮ ಸದನದಲ್ಲಿ ನಡೆಯಿತು, ಮುಖ್ಯ ಅತಿಥಿಯಾಗಿ ಸದಾನಂದ ಹೆಗ್ಡೆ ನಿವೃತ್ತ ಅಬಕಾರಿ ಸೂಪೇರಿಡೆಂಟ್ ಅವರು ಭಾಗವಹಿಸಿ ಕಾರ್ಯಕ್ರಮನ್ನು ಪಿಂಗಾರ ಹೂ ಅರಳಿಸುವ ಮೂಲಕ ಉದ್ಘಾಟನೆ ಮಾಡಿದರು
ಆಟಿದ ಮದಿಪನ್ನು ಸುಧಾ ನಾಗೇಶ್ ಅವರು ಮುಂಚಿನ ಆಟಿ ಹೇಗಿತ್ತು ಯಾವ ರೀತಿ ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಪೂರ್ವಜರು ನಮ್ಮಸುತ್ತಮುತ್ತ ಬೆಳೆಯುವ ಸೊಪ್ಪು ತರಕಾರಿಯನ್ನು ಬಳಸಿ ಜೀವನ ನಡೆಸುತ್ತಿದ್ದರು ಎಂಬುವುದನ್ನು ಬಹಳ ವಿಸ್ತಾರವಾಗಿ ತಿಳಿಸಿದರು
ಚೆಮಾಂನ್ನೂರು ಜ್ಯುವೆಲರಿ ಯ ರಿಜಿನಲ್ ಮ್ಯಾನೇಜರ್ ಜಯಪ್ರಕಾಶ್ ತುಳುನಾಡ ಸಂಸ್ಕೃತಿಯ ಸೊಗಸನ್ನು ಹೊಗಳಿದರು, ಡಾ ಪ್ರಭಾಕರ್ ನೀರುಮಾರ್ಗ ಆಟಿದ ಕುಸಲ್ ಹೇಳಿ ನಮ್ಮ ಹಿರಿಯರನ್ನು ಗೌರವಿಸಬೇಕೆಂದು ತಿಳಿ ಹೇಳಿದರು
ತುಳು ಪರಿಷತ್ ನ ಅಧ್ಯಕ್ಷ ರಾದ ಶುಭೋದಯ ಆಳ್ವರವರು ಹಿಂದಿನ ಕಾಲ ಘಟ್ಟ ದಲ್ಲಿ ಆಟಿ ತಿಂಗಳಲ್ಲಿ ಎಲ್ಲಾ ಜನಾಂಗ ದವರು ಅನ್ಯೋನ್ಯಯಲ್ಲಿ ಬದುಕು ಸಾಗಿಸುತ್ತಿದ್ದರು. ಒಬ್ಬರು ಇನ್ನೊಬ್ಬರಿಗೆ ಸ್ಪಂದಿಸುತ್ತಿದ್ದರು.ಇನ್ನು ಮುಂದಿನ ನಮ್ಮ ಯುವ ಪೀಳಿಗೆ ಇದನ್ನು ಅರಿತು ತುಳು ನಾಡಿನ ಎಲ್ಲಾ ಬಾಷೆ, ಜಾತಿ, ಧರ್ಮ ದವರು ಸೌಹಾರ್ದತೆಯಿಂದ ಬಾಳುವುದರ ಮುಖಾಂತರ ಮುಂದಿನ ಪೀಳಿಗೆ ತುಳು ನಾಡನ್ನು ಮಾದರಿಯಾಗಿ ತೋರಿಸಬೇಕು ಎಂದು ಹಿತ ವಚನ ನೀಡಿದರು .
ಕಾರ್ಯಕ್ರಮದಲ್ಲಿ ಹಲವಾರು ಮನೋರಂಜನಾ ಸ್ವರ್ಧೆಗಳು, ಬಗೆಬಗೆಯ ಆಟಿಯ ಖಾದ್ಯಗಳು ಇದ್ದವು, ವೇದಿಕೆಯಲ್ಲಿ ಶಕ್ತಿ ಲಯನ್ಸ್ ಅಧ್ಯಕ್ಷರು ಶ್ರೀಮತಿ ಹಸೀನಾ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ, ಕಾರ್ಯದರ್ಶಿ ಅಮಿತಾ ಅಶ್ವಿನ್, ಕೋಶಾಧಿಕಾರಿ ಸುಮತಿ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರು ರಾಕೇಶ್ ಕುಂದರ್ ವಂದಿಸಿದರು,ಅಮಿತಾ ಅಶ್ವಿನ್ ಕಾರ್ಯಕ್ರಮವನ್ನು ನಿರೂಪಿಸಿದರು

