ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಆಶ್ರಯದಲ್ಲಿ, ಪುತ್ತೂರು ವಲಯ ಅರಣ್ಯಾಧಿಕಾರಿಗಳ ಸಹಕಾರ ಹಾಗೂ ವಿಠಲ ಎಜುಕೇಶನ್ ಸೊಸೈಟಿ, ವಿಟ್ಲ ಇವರ ಸಹಯೋಗದಲ್ಲಿ ವಿಟ್ಲ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ವಿಠಲ ಎಜುಕೇಶನ್ ಸೊಸೈಟಿಯ ಸಂಚಾಲಕ ಎಂ. ರಾಧಾಕೃಷ್ಣ ನಾಯಕ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಲಯನ್ ಶ್ವೇತಾ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವಿಠಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶಂಕರ್ ನಾರಾಯಣ ಪ್ರಸಾದ್ ಎಲ್.ಬದನಾಜೆ, ಆಡಳಿತ ಮಂಡಳಿ ಸದಸ್ಯ ಎಂ.ನಿತ್ಯಾನಂದ ನಾಯಕ್, ನಿಕಟಪೂರ್ವ ಪಿಆರ್ಒ ಸುದರ್ಶನ್ ಪಡಿಯಾರ್, ವಿಟ್ಲ ಕಾರ್ಯದರ್ಶಿ ಎಂ.ದಿನಕರ ಆಳ್ವ, ಅಧ್ಯಾಪಕರಾದ ಮೋಹನ್ ಹಾಗೂ ದೈಹಿಕ ಶಿಕ್ಷಣಾಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿಗಳು, ಸ್ಕೌಟ್–ಗೈಡ್ಸ್ ಹಾಗೂ ಎನ್ಸಿಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಜಾತಿಯ ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

