ಧಾರವಾಡ : ನಗರದ ಸವದತ್ತಿ ರಸ್ತೆಯಲ್ಲಿ ಶಿವಾಜಿ ಸರ್ಕಲ್ ಬಳಿ ಇರುವ ಆರ್ಥೋ ಕೇರ್ ಸೆಂಟರ್ದಲ್ಲಿ 80ನೆಯ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಆ.15 (ಶನಿವಾರ) ಮುಂಜಾನೆ 11 ಗಂಟೆಯಿ0ದ ರಾತ್ರಿ 8 ರವರೆಗೆ ಸತತ 9 ಗಂಟೆಗಳ ದೀರ್ಘ ಅವಧಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಎಲುಬು ಮತ್ತು ಕೀಲು ತಜ್ಞ ಡಾ.ವಿಕಾಸ ಗುರು ತಿಗಡಿ ನೇತೃತ್ವದಲ್ಲಿ ಈ ಶಿಬಿರ ಜರುಗಲಿದ್ದು, ಮೂಳೆ, ಸಂದಿ, ಸ್ನಾಯು ಸಮಸ್ಯೆಗಳಿಗೆ ಸೂಕ್ತ ತಪಾಸಣೆ ಕೈಕೊಂಡು ವೈದ್ಯಕೀಯ ಸಲಹೆಗಳನ್ನು ನೀಡುವರು. ಮಣಕಾಲು ಚಿಪ್ಪುಗಳಲ್ಲಿಯ ವಿಭಿನ್ನ ತೊಂದರೆಗಳು, ಪಾದಗಳ ನೋವು, ಬೆನ್ನು ನೋವು, ಭುಜ-ಕುತ್ತಿಗೆ ನೋವು, ವಿವಿಧ ಸಂದುಗಳಲ್ಲಿಯ ಹೊಡೆತ, ಕ್ರೀಡಾ ಗಾಯಗಳು ಮತ್ತು ನಡೆಯಲು ತೊಂದರೆ ಅನುಭವಿಸುತ್ತಿರುವವರು ಮೊಬೈಲ್ ಸಂಖ್ಯೆ : 8073602950 ಮೂಲಕ ಹೆಸರು ನೋಂದಾಯಿಸಿ ಉಚಿತ ತಪಾಸಣೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಆರ್ಥೋ ಕೇರ್ ಸೆಂಟರ್ ಪ್ರಕಟಣೆ ತಿಳಿಸಿದೆ.

