ಮಂಗಳೂರು : ಸಾಮ್ರಾಟ್ ಕ್ರಿಕೆಟರ್ಸ್ (ರಿ.) ಕುಂಜತ್ತ್ ಬೈಲ್, ಮಂಗಳೂರು ಇದರ ವತಿಯಿಂದ 80 ನೇ ಸ್ವಾತಂತ್ರೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮವು ಕುಂಜತ್ತಬೈಲ್ ಜಂಕ್ಷನ್ ನಲ್ಲಿ ಜರುಗಿತು.
ಮ.ನ.ಪಾ ನಿಕಟ ಪೂರ್ವ ಸದಸ್ಯರಾದ ಶರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಸಿದ್ದೀಖ್ ಜುಮಾ ಮಸ್ಜಿದ್ ಮರಕಡ ಇದರ ಅಧ್ಯಕ್ಷರಾದ ಮೈಯದ್ದಿ ಬ್ಯಾರಿ, ಕೂಳೂರು ಕಾವೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹುಸೈನ್ ರಿಯಾಝ್,ಕಾವೂರು ಪೋಲಿಸ್ ಠಾಣೆಯ ಸಹಾಯಕ ನಿರೀಕ್ಷಕರಾದ ರಾಮಣ್ಣ ಶೆಟ್ಟಿ, ಸಾಮ್ರಾಟ್ ತಂಡದ ಅಧ್ಯಕ್ಷ ನಾಸೀರ್ ಕುಂಜತ್ತಬೈಲ್, ಖವ್ವತುಲ್ ಇಸ್ಲಾಂ ಮದರಸ ಕುಳ ಇದರ ಅಧ್ಯಕ್ಷರಾದ ಮಹಮ್ಮದ್ ಚೆಯ್ಯಾಬ್ಬ ಬ್ಯಾರಿ,ಸಾಮ್ರಾಟ್ ತಂಡದ ಮಾಜಿ ನಾಯಕರಾದ ಚಂದ್ರರಾಜ ಶೆಟ್ಟಿ, ಬಿ.ಕೆ ಮೊಹಮ್ಮದ್, ಶೇಕ್ ಅಬ್ದುಲ್ಲಾ, ಗಲ್ಪ್ ನೌಕರರ ಸಂಘದ ಅಧ್ಯಕ್ಷ ನಝೀರ್ ಮೊಹಿದ್ದೀನ್,ಸ್ಥಳೀಯರಾದ ಏಜಾಝ್ ಪಾಷ, ವಾಝಿ ಕುಂಜತ್ತಬೈಲ್, ಸಾಮ್ರಾಟ್ ತಂಡದ ಪಧಾದಿಕಾರಿಗಳಾದ ನೌಫಲ್, ಇಬ್ರಾಹಿಂ, ನಾಸೀರ್ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಾದ ಫಾತಿಮಾ ಝಾಕಿಯಾ, ಚೇತನಾ.ಎಮ್, ದರ್ಶ್.ಆರ್. ಪೂಜಾರಿ, ಧ್ಯಾನ್.ಆರ್. ಪೂಜಾರಿ ಇವರನ್ನು ಅಭಿನಂದಿಸಲಾಯಿತು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.


