ಕಾಸರಗೋಡು : ವಿಶ್ವ ಹಿಂದೂ ಪರಿಷತ್ತು, ಕಾಸರಗೋಡು ಪ್ರಖಂಡ ಇದರ ವತಿಯಿಂದ ರಾಮಾಯಣ ಮಾಸಾಚರಣೆಯ ಅಂಗವಾಗಿ ಕಾಸರಗೋಡು ನಗರದಲ್ಲಿ ಒಂದು ತಿಂಗಳ ಪರ್ಯಂತ “ಧರ್ಮ ಜಾಗೃತಿ ಭಜನಾ ಯಾತ್ರೆ” 17-7-26 ರಿಂದ ಪ್ರಾರಂಭವಾಗಿ ಇಂದಿನ ತನಕ ಹಲವಾರು ಮನೆಗಳಲ್ಲಿ ಶ್ರೀ ರಾಮನ ಸ್ಮರಣೆ ಮಾಡುತ್ತಾ ಧರ್ಮ ಜಾಗೃತಿಯನ್ನು ಮೂಡಿಸುತ್ತಾ….ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ….ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮಾ….ಎಂಬಂತೆ ಈ ವಾರ್ಡಿನ ಭಜನಾಸಕ್ತರು ಸಂಕೀರ್ತನಾ ಸೇವೆಯನ್ನು ಮಾಡಿದ್ದೇವೆ.

ಈ ರೀತಿಯ ಸಂಪರ್ಕದಿಂದ ಪ್ರತೀ ಮನೆಯಲ್ಲಿ ಪ್ರತೀ ದಿನ ಭಜನೆ ನಡೆಯಲಿ. ಸಂಕೀರ್ತನಾ ಯಾನದಲ್ಲಿ ಮಹನೀಯರು, ಮಾತೆಯರು, ಮಕ್ಕಳು ಭಾಗವಹಿಸಿರುತ್ತಾರೆ. ಅಲ್ಲದೆ ಭಜನೆಗೆ ವ್ಯವಸ್ಥೆ ಮಾಡಿದ ಎಲ್ಲಾ ಮನೆಯವರಿಗೆ , ಸಹಕಾರ ನೀಡಿದ ಪ್ರತಿಯೊಬ್ಬರನ್ನೂ ಶ್ರೀ ರಾಮನು ಅನುಗ್ರಹಿಸಲಿ…

ಈ ವರ್ಷದ ರಾಮಾಯಣ ಮಾಸಚರಣೆಯ ಕೊನೆಯ ಭಜನೆ ಸಂಕೀರ್ತನೆಯನ್ನು 17.8.26 ರಂದು ಸಂಜೆ 7 ರಿಂದ 8 ರ ತನಕ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಸಲಾಗುವುದು.

