ವಿಟ್ಲ: ದ.ಕ.ಜಿ.ಪಂ. ಹಿ.ಪ್ರಾ. ಶಾಲೆ, ಕಡಂಬು ಇಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸರ್ಕಾರದ ‘ಏಕ್ ಪೇಡ್ ಮಾಕೇ ನಾಮ್’ ಯೋಜನೆಯ ಆಶಯದಂತೆ ಪರಿಸರ ಸಂರಕ್ಷಣೆ ಹಾಗೂ ಮಕ್ಕಳಲ್ಲಿ ಗಿಡ ನೆಡುವ ಅಭ್ಯಾಸ ಬೆಳೆಸುವ ಉದ್ದೇಶದಿಂದ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಗಿಡವನ್ನು ವಿತರಿಸಲಾಯಿತು. ಅಲ್ಲದೆ, ಶಾಲಾ ಆವರಣದಲ್ಲಿಯೂ ವಿವಿಧ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ನ ನಿಕಟಪೂರ್ವ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷೆ ಶ್ವೇತಾ ರವಿಕುಮಾರ್, ಉಪಾಧ್ಯಕ್ಷ ಚಂದ್ರಹಾಸ ಗೌಡ, ಖಜಾಂಜಿ ಒ.ಎ. ಕೃಷ್ಣ, ಸದಸ್ಯರಾದ ಮೋಹನ್ ಕಟ್ಟೆ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಿ.ಎಂ. ಹಾಸೈನಾರ್, ಮುಖ್ಯ ಶಿಕ್ಷಕಿ ಗೀತಾ ಎಸ್., ಸಹ ಶಿಕ್ಷಕರಾದ ಶೋಭಾಲತಾ ಯಂ. ಹಾಗೂ ರಶ್ಮಿ ಎಂ.ವಿ, ಗೌರವ ಶಿಕ್ಷಕರಾದ ತೃಪ್ತಿ ಮತ್ತು ಮೌರುಫ ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವುದರ ಜೊತೆಗೆ, ನೆಟ್ಟ ಗಿಡಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳಿಗೆ ನೀಡಲಾಯಿತು.

