ಕಾಸರಗೋಡು: ಚಾಮುಂಡಿಕುನ್ನುವಿನ ಶಿಲ್ಪಿ ಕಲಾ ಕಾಯಿಕ ಕೇಂದ್ರ ಹಾಗೂ ಬಾಲಸಂಘಂ ಚಾಮುಂಡಿಕುನ್ನು ಘಟಕದ ವತಿಯಿಂದ ಓಣಂ ಆಚರಣೆ 2026 ಆ.28ರಂದು ನಡೆಯಲಿದೆ.
ಚಾಮುಂಡಿಕುನ್ನು ಪರಿಶ್ರಮ ಮಂದಿರ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಳಗ್ಗೆ 9.30ಕ್ಕೆ ಧ್ವಜಾರೋಹಣ ನಡೆಯಲಿದೆ. ಬಾಲಸಂಘಂ ಚಾಮುಂಡಿಕುನ್ನು ಘಟಕದ ಕಾರ್ಯದರ್ಶಿ ಅನಾಮಿಕಾ ಸ್ವಾಗತಿಸಲಿದ್ದು, DYFI ಚಾಮುಂಡಿಕುನ್ನು ಘಟಕದ ಅಧ್ಯಕ್ಷ ಪ್ರಣವ್ ವಿ. ಅಧ್ಯಕ್ಷತೆ ವಹಿಸುವರು. ನಾಡಿನ ಕವಿ ಪಿ.ಕಾರ್ಯಂಬು ಉದ್ಘಾಟಿಸುವರು.
ಮಧ್ಯಾಹ್ನ 10ರಿಂದ 20 ವರ್ಷದೊಳಗಿನವರಿಗೆ ಕ್ವಿಜ್ ಸ್ಪರ್ಧೆ ನಡೆಯಲಿದೆ. ಬಳಿಕ ಲಘು ಸಂಗೀತ, ಕವನ ವಾಚನ, ಸಿನೆಮಾ ಹಾಡು, ಕ್ರಾಂತಿಗೀತೆ ಹಾಗೂ ಮಾಪಿಳ ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಸಂಜೆ 7.30ಕ್ಕೆ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು, ಕ್ಲಬ್ ಕಾರ್ಯದರ್ಶಿ ರಾಜೇಶ್ ಚಾಮುಂಡಿಕುನ್ನು ಸ್ವಾಗತಿಸಲಿದ್ದಾರೆ. ಕ್ಲಬ್ ಅಧ್ಯಕ್ಷ ಅನೂಪ್ ಮೀತ್ತಲ್ ಅಧ್ಯಕ್ಷತೆ ವಹಿಸುವರು. ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಸಿ.ವಿ. ಉದ್ಘಾಟಿಸುವರು. ವಿವಿಧ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದವರನ್ನು ಈ ಸಂದರ್ಭ ಅಭಿನಂದಿಸಲಾಗುವುದು.
ಸೂರಜ್ ಮೀತ್ತಲ್ ಹಾಗೂ ಮನ್ಸೂರ್ ಬಹುಮಾನ ವಿತರಿಸುವರು. ಕೃಪೇಶ್ ಮೀತ್ತಲ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಸಬೀಷ್, ಸಿಪಿಐ(ಎಂ) ಚಿತ್ತಾರಿ ಲೋಕಲ್ ಕಮಿಟಿ ಸದಸ್ಯ ಮುಹಮ್ಮದ್ ಕುಞ್ಞಿ, DYFI ಚಿತ್ತಾರಿ ವಲಯ ಕಾರ್ಯದರ್ಶಿ ಅನೀಶ್ ಕೆ., ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ದಿನೇಶನ್ ತಾಣತ್ತಿಕ್ಕಾಲ್ ಹಾಗೂ ಮಾತೃ ಸಮಿತಿ ಸಂಚಾಲಕಿ ಶಾಲಿನಿ ಶುಭ ಹಾರೈಸುವರು. ಕ್ಲಬ್ ಖಜಾಂಚಿ ಸುಜಿತ್ ಕುಂಞತು ವಂದನಾರ್ಪಣೆ ಸಲ್ಲಿಸುವರು.
ರಾತ್ರಿ 8.30ಕ್ಕೆ ಕಲಾ ಸಂಜೆ ನಡೆಯಲಿದೆ.
ಓಣಂ ಆಚರಣೆಯಲ್ಲಿ ಊರಿನ ಎಲ್ಲರೂ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಶಿಲ್ಪಿ ಕಲಾ ಕಾಯಿಕ ಕೇಂದ್ರದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

