ಕಾಸರಗೋಡು : ಡಾ.ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ(ರಿ) ಕಾಸರಗೋಡು ಇವರಿಂದ ಸಂಘದ 243ನೇ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಓಣಂ ಹಬ್ಬದ ಆಚರಣೆ ಹಾಗೂ ಸಾಹಿತ್ಯ ಗಾನ ನೃತ್ಯ ವೈಭವವನ್ನು 28 ಆಗಸ್ಟ್ 2026ರಂದು ಸಂಘದ ಹಿತೈಷಿಗಳಾದ ಶ್ರೀ ಮಹಾಲಿಂಗ ಇವರ ಮನೆಯಲ್ಲಿ ನಡೆಸಲಾಯಿತು.
ಓಣಂ ಹಬ್ಬದ ವಿಶೇಷತೆಗಳಲ್ಲೊಂದಾದ ಪೂಕಳಂ ಅಂದರೆ ಹೂವಿನ ಆಕರ್ಷಕ ರಂಗೋಲಿ ಎಲ್ಲರ ಗಮನ ಸೆಳೆಯಿತು. ಸಂಘದ ಅಧ್ಯಕ್ಷರಾದ ಡಾ.ವಾಣಿಶ್ರೀ ಕಾಸರಗೋಡು ಓಣಂ ಹಬ್ಬದ ಆಚರಣೆ ಮತ್ತು ಮಹತ್ವದ ಬಗ್ಗೆ ಮಾತನಾಡುತ್ತಾ ಒಣo ಹಬ್ಬವನ್ನು ಕೇರಳ ರಾಜ್ಯಾದ್ಯಂತ ಬಹಳ ಸಡಗರದಿಂದ ಆಚರಿಸುತ್ತಿದ್ದು, ಭಗವಾನ್ ವಿಷ್ಣುವಿನ ಅವತಾರ ವಾಮನ ಮತ್ತು ಕೇರಳವನ್ನು ಆಳಿದ ಮಹಾಬಲಿಯನ್ನು ಊರಿಗೆ ಸ್ವಾಗತಿಸುವ ಸಂಭ್ರಮಾಚರಣೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಅಚ್ಚುತ ಭಟ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯದರ್ಶಿ ಶ್ರೀ ಸುರೇಶ್ ಉಡುಪಿ ಕಾರ್ಯಕ್ರಮದ ಆಯೋಜನೆಗೆ ಮಾರ್ಗದರ್ಶನ ನೀಡಿದರು.
ಓಣಂ ಸಂಭ್ರಮಾಚರಣೆ ಅಂಗವಾಗಿ ಶಿವದುರ್ಗಾ ವೇದಿಕೆ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನ ಚೂರಿಪ್ಪಳ್ಳ ನೆಲ್ಲಿಕಟ್ಟೆ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಕಲಾವಿದರಾದ ಡಾ.ವಾಣಿಶ್ರೀ ಕಾಸರಗೋಡು, ಆಂಶಿಕರಾಜ್ ಅನ್ವಿರಾಜ್,ಭವಿತ್ ಅಭಿನಂದನ್ ಸುಚಿತ್ರ ಶ್ರೇಯಸ್ ಮಹಾಲಿಂಗ ಮತ್ತು ಚಂದ್ರಾವತಿ ಮುತಾದವರು ಭಾಗವಹಿಸಿದ್ದರು.

