ಕಾಸರಗೋಡು : ಕಾಸರಗೋಡು ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಇದರ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕೈಲಾಸ ಕಲ್ಯಾಣ ಮಂಟಪದಲ್ಲಿ 44 ನೇ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಜರಗಿತು.
ಸಾಯಂಕಾಲ ಕಲಶ ಪ್ರತಿಷ್ಠೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿ.ಎಚ್.ಪಿ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಅರುಣ ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿದರು ಕವಯತ್ರಿ, ಸಾಹಿತಿಕಾರರಾದ ಶ್ರೀಮತಿ ಜಯಲಕ್ಷ್ಮಿ ಶಾನ್ ಭೋಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಇಂದಿನ ಕಾಲಘಟ್ಟದಲ್ಲಿ ಮಾತೆಯರು ಮಕ್ಕಳನ್ನು ಸಂಸ್ಕಾರಯುತರಾಗಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಬೇಕು, ನಮ್ಮ ಆಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ ಹೇಳಿಕೊಡುವ ಜವಾಬ್ಧಾರಿ ಮಾತೆಯರಿಗಿದೆ ಎಂದು ನುಡಿದರು

ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಗೌರವಾಧ್ಯಕ್ಷೆಯಾದ ಶ್ರೀಮತಿ ಸುಲೋಚನಾ ಎ.ಟಿ.ನಾಯ್ಕ್, ಶ್ರೀಮತಿ ಹಿರಿಯ ಮಾರ್ಗದರ್ಶಕಿಯಾದ ಸವಿತಾ ಟೀಚರ್ ಉಪಸ್ಥಿತರಿದ್ದರು, ಶ್ರೀಲತಾ ಟೀಚರ್ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು ಕಾರ್ಯದರ್ಶಿ ಶ್ರೀಮತಿ ಸವಿತಾ ಕಿಶೋರ್ ಇವರು 2025 ರ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಶ್ರೀಮತಿ ಶ್ರೀದೇವಿ ರಾವ್ ಸ್ವಾಗತಿಸಿ ಶ್ರೀವಳ್ಳಿ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಲೀಲಾ ಸುಜಯ್ ವಂದಿಸಿದರು.
ಮಹಿಳೆಯರು ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಹಾಗೂ ಲಕ್ಷ್ಮೀ ಸ್ತೋತ್ರ ಪಠಣ ಮಾಡಿದರು. ರಾತ್ರಿ 8 ಗಂಟೆಗೆ ಅರ್ಚಕರಾದ ಶ್ರೀ ಕೃಷ್ಣಪ್ರಸಾದ್ ಮುಟ್ಟತ್ತೋಡಿ ಇವರ ನೇತೃತ್ವದಲ್ಲಿ ಮಹಾಪೂಜೆ ಜರಗಿತು. ಹಿರಿಯರಾದ ಶ್ರೀಮತಿ ಸುಜಾತ, ಭಾರತೀ ಗಣೇಶ್, ವೀಣಾ ಮೈಂದಪ್ಪ, ಮಾತೃ ಮಂಡಳಿಯ ಕೋಶಾಧಿಕಾರಿ ಸೌಮ್ಯ, ನಗರ ಸಭಾ ಸದಸ್ಯೆ ದಿವ್ಯಾ ಸಂದೀಪ್, ಪ್ರೇಮಾ, ಶಾರದಾ ರಾವ್, ವೀಣಾ ರಂಗನಾಥನ್, ಶ್ವೇತಾ, ಗೀತಾ, ಸರಸ್ವತಿ ಭಾಗಿಯಾದರು.
ಈ ಸಂದರ್ಭದಲ್ಲಿ ವಿ.ಎಚ್.ಪಿ. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ , ಅಧ್ಯಕ್ಷರಾದ ಗುರುಪ್ರಸಾದ್ ಕೋಟೆಕಣಿ, ನಗರಸಭಾ ಸದಸ್ಯ ಕೆ.ಎನ್.ರಾಮಕೃಷ್ಣ ಹೊಳ್ಳ, ಧಾರ್ಮಿಕ ನೇತಾರ ಜಯರಾಮ್ ಶೆಟ್ಟಿ, ವಾಮನ್ ರಾವ್ ಬೇಕಲ್, ಕಿಶೋರ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು ಪೂಜೆಯಲ್ಲಿ ಭಾಗಿಯಾದರು.

