ಬಜಪೆ: ಕರಂಬಾರು ಪೆಟ್ರೋಲ್ ಪಂಪ್ ಸಮೀಪದ ಸೇತುವೆ ಕುಸಿದಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬಜಪೆ ಪೊಲೀಸ್ ಠಾಣೆ ಸೂಚನೆ ನೀಡಿದೆ.
ಮಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವವರು ಜರಿನಗರ ಅಥವಾ ಪೊರ್ಕೋಡಿ ರಸ್ತೆಯ ಮೂಲಕ ತೆರಳುವಂತೆ ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ, ಕಟೀಲು, ಬಜಪೆ ಹಾಗೂ ಕೈಕಂಬ ಕಡೆಗೆ ತೆರಳುವ ವಾಹನ ಸವಾರರು ಕೂಡ ಜರಿನಗರ ಅಥವಾ ಪೊರ್ಕೋಡಿ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸುವಂತೆ ಸೂಚಿಸಲಾಗಿದೆ.
ಸೇತುವೆ ಕುಸಿತದಿಂದಾಗಿ ಉಂಟಾಗಿರುವ ಸಂಚಾರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಪೊಲೀಸರ ಸೂಚನೆಯನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.


