ಕಾಸರಗೋಡು: ಕಾಸರಗೋಡು ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ್ಮೀಭಾಯಿ ನಗರ ಶಾಖೆಯ ವತಿಯಿಂದ ರಕ್ಷಾಬಂಧನ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅನುಶ್ರೀ. ಕೆ. ಅವರು ಮುಖ್ಯಶಿಕ್ಷಕಿಯಾಗಿ ಜವಾಬ್ದಾರಿ ವಹಿಸಿದ್ದರು. ಬೌದ್ಧಿಕ್ ಕಾರ್ಯಕ್ರಮದಲ್ಲಿ ಕೆ.ಎನ್. ರಾಮಕೃಷ್ಣ ಹೊಳ್ಳ ಅವರು ರಕ್ಷಾಬಂಧನದ ಮಹತ್ವ ಹಾಗೂ ಅದರ ಹಿಂದಿರುವ ಸಹೋದರತ್ವದ ಸಂದೇಶದ ಕುರಿತು ಮಾತನಾಡಿದರು.

ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀವಳ್ಳಿ ಅವರು ಸಂಘ ಪ್ರಾರ್ಥನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಹಿಳೆಯರು ಹಾಗೂ ಮಕ್ಕಳು ಪರಸ್ಪರ ರಕ್ಷೆ ಕಟ್ಟಿ ರಕ್ಷಾಬಂಧನದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಪರಸ್ಪರ ಪ್ರೀತಿ, ಸಹೋದರತ್ವ ಹಾಗೂ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂದೇಶವನ್ನು ಕಾರ್ಯಕ್ರಮ ಸಾರಿತು.

