ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಜಪ್ಪು ಗುಳಿಗಜ್ಜ ದೈವಸ್ಥಾನ ಬಳಿಯಿಂದ ನೇತ್ರಾವತಿ ನದಿಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕರು, ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಗುಳಿಗಜ್ಜ ಕಟ್ಟೆಗೆ ಹೋಗುವ ಮುಖ್ಯ ರಸ್ತೆಯ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಮುಖ್ಯ ಕಾರಣವೆಂದರೆ, ಈ ಭಾಗದಲ್ಲಿ ಮಳೆಗಾಲದಲ್ಲಿ ನೀರು ನಿಂತು ಸುತ್ತಮುತ್ತಲಿನ ನಿವಾಸಿಗಳಿಗೆ ಆಗುತ್ತಿದ್ದ ತೀವ್ರ ಸಮಸ್ಯೆ ಹಾಗಾಗಿ ಸ್ಥಳೀಯರ ಮತ್ತು ಇಲ್ಲಿನ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶ್ರೀ ಶೈಲೇಶ್ ಬಿ.ಶೆಟ್ಟಿಯವರ ನಿರಂತರ ಮನವಿಯ ಮೇರೆಗೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರದಂತೆ ಸಾಕಷ್ಟು ಅನುದಾನಗಳು ಬರುತ್ತಿಲ್ಲವಾದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಅತ್ಯಲ್ಪ ಅನುದಾನದಲ್ಲೇ ಈ ಕಾಮಗಾರಿಗೆ ಅಗತ್ಯವಿರುವ ಅನುದಾನಗಳನ್ನು ಹೊಂದಿಸಿಕೊಳ್ಳುವ ಪರಿಸ್ಥಿತಿಯಿದೆ ಎಂದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಬಿ.ಶೆಟ್ಟಿ, ಪ್ರಮುಖರಾದ ಪುಷ್ಪರಾಜ್ ಶೆಟ್ಟಿ, ಲಲ್ಲೇಶ್, ಪ್ರಮೋದ್ ಕೊಟ್ಟಾರಿ, ರಾಜೇಂದ್ರ ಶೆಟ್ಟಿ, ಸೋಮಶೇಖರ್, ನಾರಾಯಣ ಕುಂದರ್, ಲೋಕೇಶ್, ಪ್ರಾಣೇಶ್, ತರುಣ್, ಚಂದ್ರಶೇಖರ್, ಮಹಿಳಾ ಪ್ರಮುಖರಾದ ಲಲಿತಾ, ಪ್ರಿತಾ ಕಾಮತ್, ಪೂಜಾ, ಅರ್ಜನಾ ರೈ, ಶರತ್ ತಿಂಗಳಾಯ, ಪ್ರೇಮಾ ನಾಯ್ಕ್, ಶ್ರೀದೇವಿ, ದಿನೇಶ್, ಚಂದ್ರಶೇಖರ, ತುಕಾರಾಮ ಅಮೀನ್, ಅಶೋಕ್, ವಸಂತ್, ಸಂತೋಷ್ ಜಪ್ಪು ಪಟ್ನ, ಇನ್ನಿತರರು ಉಪಸ್ಥಿತರಿದ್ದರು.

