ಮಂಗಳೂರು : ಸೆಪ್ಟೆಂಬರ್ 5 ಶನಿವಾರದಂದು ಕಳುವಾರು ಶಿಕ್ಷಣ ಸಂಸ್ಥೆ , ಚೇಳ್ಯಾರು ಇಲ್ಲಿ ಶಾಲಾ ಆಡಳಿತ ಆಡಳಿತ ಸಮಿತಿ ವಿದ್ಯಾವಿಕಾಸ ಟ್ರಸ್ಟ್, SDMC, ಶಾಲಾ ಹಳೆ ವಿದ್ಯಾರ್ಥಿ ಸಂಘ, ಮತ್ತು ಶಿಕ್ಷಕ ರಕ್ಷಕ ಸಂಘ ದ” ವತಿಯಿಂದ ಶಿಕ್ಷಕರ ದಿನ” ಆಚರಣೆ ಕಾರ್ಯಕ್ರಮ ವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರನ್ನು ಮತ್ತು ಶಿಕ್ಷಕೇತರ ಸಿಬ್ಬಂದಿಯರನ್ನು ಶಾಲು, ಫಲಪುಷ್ಪ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು…
ಕಾರ್ಯಕ್ರಮದ ವೇದಿಕೆಯಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ರಾಘವ ಸನಿಲ್, ಕಾರ್ಯದರ್ಶಿ ಬಿ.ಲಕ್ಷ್ಮೀಶ ರಾವ್, ಕೋಶಾಧಿಕಾರಿ ಮತ್ತು ಶಾಲಾ ಸಂಚಾಲಕರು ಬಿ.ರವೀಂದ್ರ ರಾವ್, SDMC ಅಧ್ಯಕ್ಷರಾದ ಶ್ರೀಯುತ ಬಾಳ ಗಂಗಾಧರ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ರೇಖಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ , ಬಾಲಕೃಷ್ಣ ಶೆಟ್ಟಿ, ಚೇಳ್ಯಾರು ಉಪಸ್ಥಿತರಿದ್ದು ಶುಭಹಾರೈಸಿದರು. ಶಾಲಾ ಶಿಕ್ಷಕ ವರ್ಗ, ಶಾಲಾ ಮುಖ್ಯೊಪಾದ್ಯಾಯಿನಿ ಶ್ರೀಮತಿ ಶೋಭಾ ಸಿ. ಹಾಗೂ ಹೆತ್ತವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳೇ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ
ಮಾಸ್ಟರ್ ಸುಮೇಧ ಕೃಷ್ಣ ಕಾರಂತ್ ಇವರು ಸ್ವಾಗತಿಸಿದರು, ಕು.ಹರ್ಷಿಕಾ ವಂದಿಸಿದರು, ಕು.ಭುವಿ ಕೆ.ವಿ. ಕಾರ್ಯಕ್ರಮ ನಿರ್ವಹಿಸಿದರು..

