ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕೊಡಿಯಾಲ್ ಬೈಲ್ ಹಾಗೂ ಕೊಡಿಯಾಲ್ ಬೈಲ್ ಫ್ರೆಂಡ್ಸ್, ಮಂಗಳೂರು ಇದರ ಆಶ್ರಯದಲ್ಲಿ 25ನೇ ವರ್ಷದ ಗಣೇಶೋತ್ಸವವು ದಿನಾಂಕ 14 ರಿಂದ 16 ರವರೆಗೆ ಬಹಳ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ
ಶ್ರೀ ವೇದಮೂರ್ತಿ ಪಾವಂಜೆ ಖಂಡಿಗೆ ಅರುಣ್ ಭಟ್ರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಬೆಳ್ಳಿ ಹಬ್ಬದ ಪ್ರಯುಕ್ತ ಶ್ರೀ ಗಣೇಶನಿಗೆ ವಿಶೇಷ ಮಹಾಗಣಪತಿ ಅಥರ್ವ ಶೀರ್ಷ ಗಣಯಾಗ ನಡೆಯಲಿದೆ
ದಿನಾಂಕ 13ರಂದು ಆದಿತ್ಯವಾರ ಸಂಜೆ 7.30ಕ್ಕೆ ಮಣ್ಣಗುಡ್ಡ ನವದುರ್ಗಾ ದೇವಳದ ಬಳಿ ಇರುವ ದಿ| ಶ್ರೀ ಮೋಹನ್ ರಾವ್ ಇವರ ಮನೆಯಿಂದ ಶ್ರೀ ದೇವರ ವಿಗ್ರಹವನ್ನು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ಹಾಕಿರುವ ಭವ್ಯವಾದ “ತಿಲಕ ಮಂಟಪ”ಕ್ಕೆ ತರಲಾಗುವುದು

ಸೆ.14 ರಂದು ಬೆಳಿಗ್ಗೆ ಗಂಟೆ 9.15ಕ್ಕೆ ಸಾಮೂಹಿಕ ಪ್ರಾರ್ಥನೆ, ಭಗವತ್ ಧ್ವಜಾರೋಹಣ ,9.30 : ದೀಪ ಬೆಳಗಿಸುವಿಕೆ ನಂತರ ತುಲಾ ಲಗ್ನದ ಸುಮುಹೂರ್ತದಲ್ಲಿ ಮಹಾಗಣಪತಿಯ ಪ್ರಾಣ ಪ್ರತಿಷ್ಠೆ, ಪ್ರಾತಃಕಾಲ ಪೂಜೆ ,ಬೆಳಿಗ್ಗೆ 10 ಗಂಟೆಗೆ 108 ತೆಂಗಿನಕಾಯಿಯ ಗಣಹೋಮ, ಮಧ್ಯಾಹ್ನ ಗಂಟೆ 12.15ಕ್ಕೆ : ಪೂರ್ಣಾಹುತಿ , ಮಹಾಪೂಜೆ, ಅಪ್ಪದ ಪೂಜೆ ನಡೆಯಲಿದೆ. ಮಧ್ಯಾಹ್ನ 3 ಗಂಟೆ ಶ್ರೀ ವಿಷ್ಣು ವಿಠೋಬ ಭಜನಾ ಮಂಡಳಿ ಬೋಳೂರು ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 5 ಗಂಟೆಗೆ ಸುಹಾನ ಸಫರ್ ಬಳಗದವರಿಂದ ”ಭಕ್ತಿ ರಸಮಂಜರಿ’ ‘ಕಾರ್ಯಕ್ರಮ, ಸಂಜೆ 7.ಗಂಟೆಗೆ ಸಾಮೂಹಿಕ ಹೂವಿನ ಪೂಜೆ ನಂತರ ಮಹಾಪೂಜೆ ,ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ.

ದಿನಾಂಕ15 ರಂದು ಬೆಳಿಗ್ಗೆ 7 ಗಂಟೆಗೆ ಉಷಾಕಾಲ ಪೂಜೆ,8.30 ಕ್ಕೆ ಪುಣ್ಯಹ ವಾಚನ, 3 ತೆಂಗಿನಕಾಯಿ ಗಣಹೋಮ, 10.30ಕ್ಕೆ ಪ್ರಾತಃಕಾಲ ಪೂಜೆ ನಂತರ ಮಧ್ಯಾಹ್ನ 12.30ಕ್ಕೆ ಸಹಸ್ರ ದೂರ್ವಾರ್ಚನೆ ಸಹಿತ ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 3 ಗಂಟೆಗೆ ಸುಜಿತ್ ನೇತೃತ್ವದ ಭಗವತಿ ಧ್ಯಾನ ಸಂಕೀರ್ತನ ತಂಡ, ಮಂಗಳೂರು ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 7 ಗಂಟೆಗೆ ಮಹಾಪೂಜೆ, ರಂಗಪೂಜೆ ನಂತರ 8 ಗಂಟೆಗೆ ಸುನಾದ ಮ್ಯೂಸಿಕಲ್ ಕುಡ್ಲ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಲಿದೆ
ದಿನಾಂಕ 16 ರಂದು ಬೆಳಿಗ್ಗೆ 7ಗಂಟೆಗೆ ಪ್ರಾತಃಕಾಲ ಪೂಜೆ, 8.30ಕ್ಕೆ ಪುಣ್ಯಹ ವಾಚನ, ಮಧ್ಯಾಹ್ನ 12 ಗಂಟೆಗೆ ಯಾಗದ ಪೂರ್ಣಾಹುತಿ,12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಮಹಾಪೂಜೆ ,4.15 ವಿಸರ್ಜನಾ ಪೂಜೆ ನಂತರ ಶೋಭಾ ಯಾತ್ರೆಯು ”ತಿಲಕ ಮಂಟಪ’ ದಿಂದ ಹೊರಟು ಬೆಸೆಂಟ್ ವೃತ್ತ, ಪಿ.ವಿ.ಎಸ್. ವೃತ್ತ, ನವಭಾರತ ವೃತ್ತ, ಡೊಂಗರಕೇರಿ, ನ್ಯೂಚಿತ್ರಾ ಚಿತ್ರಮಂದಿರ, ರಥಬೀದಿ, ಶ್ರೀ ವೆಂಕಟರಮಣ ದೇವಸ್ಥಾನವಾಗಿ ಮಹಮ್ಮಯಿ ಕೆರೆಯಲ್ಲಿ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು


