ಮಂಗಳೂರು: ವಿದ್ಯಾರ್ಥಿಗಳಿಗೆ ನೈಜ-ಪ್ರಪಂಚದ ಸವಾಲುಗಳನ್ನು ಗುರುತಿಸಲು, ನವೀನ ತಂತ್ರಜ್ಞಾನ-ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು, ಮೂಲಮಾದರಿಗಳನ್ನು (prototypes) ಪ್ರದರ್ಶಿಸಲು, ಉದ್ಯಮ ಮತ್ತು ಶೈಕ್ಷಣಿಕ ತಜ್ಞರೊಂದಿಗೆ ಸಂವಹನ ನಡೆಸಲು ಹಾಗೂ ಮೌಲ್ಯಯುತ ಪ್ರತಿಕ್ರಿಯೆ ಮತ್ತು ಮಾರ್ಗದರ್ಶನವನ್ನು ಪಡೆಯಲು ಸುಸಜ್ಜಿತ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಕೆನರಾ ಇಂಜಿನಿಯರಿಂಗ್ ಕಾಲೇಜಿನ ‘ತಾಂತ್ರಿಕ ಚಟುವಟಿಕೆಗಳ ವಿಭಾಗ’ದ ವತಿಯಿಂದ (TAC) ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ( 2026 – ಕಾಲೇಜಿನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 65ಕ್ಕೂ ಹೆಚ್ಚು ತಂಡಗಳು ಸಕ್ರಿಯವಾಗಿ ಭಾಗವಹಿಸಿದವು. ಭಾಗವಹಿಸಿದ ತಂಡಗಳಿಗೆ ಉದ್ಯಮದ ತಜ್ಞರು ಮತ್ತು ಶೈಕ್ಷಣಿಕ ತೀರ್ಪುಗಾರರೊಂದಿಗೆ ಸಂವಹನ ನಡೆಸುವ ಅಮೂಲ್ಯ ಅವಕಾಶ ದೊರೆಯಿತು. ಅಲ್ಲದೆ, ತಮ್ಮ ಪ್ರಸ್ತಾವಿತ ಪರಿಹಾರಗಳು ಮತ್ತು ಮೂಲಮಾದರಿಗಳನ್ನು ಮತ್ತಷ್ಟು ಸುಧಾರಿಸಲು ಹಾಗೂ ಬಲಪಡಿಸಲು ಸಹಾಯಕವಾಗುವಂತಹ ಒಳನೋಟವುಳ್ಳ ಸಲಹೆಗಳು, ರಚನಾತ್ಮಕ ಪ್ರತಿಕ್ರಿಯೆ ಮತ್ತು ತಜ್ಞರ ಅಭಿಪ್ರಾಯಗಳನ್ನು ಅವರು ಪಡೆದುಕೊಂಡರು.
ಮುಖ್ಯ ಕಾರ್ಯಕ್ರಮ ಸಂಯೋಜಕ, ಕಾಲೇಜಿನ ಪ್ರಾಂಶುಪಾಲ ಡಾ.ಡೇಮಿಯನ್ ಆಂಟನಿ ಡಿಮೆಲ್ಲೊ ಹಿರಿತನದಲ್ಲಿ ಕಾಲೇಜಿನ ಡಾ.ಗುರುದೇವ ಶಾಸ್ತ್ರಿ ಹಿರೇಮಠ, ತಾಂತ್ರಿಕ ಚಟುವಟಿಕೆಗಳ ವಿಭಾಗದ ಮುಖ್ಯ ಸಂಯೋಜಕ ಡಾ.ರಕ್ಷಿತ್ ಎಂಡಿ. ಸಹಿತ ಮುಖ್ಯ ಅತಿಥಿ, ಬಾಹ್ಯ ಉದ್ಯಮ ತೀರ್ಪುಗಾರರಾಗಿದ್ದ ಇನ್ಫೋಸಿಸ್ ನ ಹಿರಿಯ ತಂತ್ರಜ್ಞಾನ ವಾಸ್ತುಶಿಲ್ಪಿ ಗಣೇಶ್ ಪ್ರಭು , ಸ್ಟೆಲ್ನಾ ಡಿಸೈನ್ಸ್ ನ ಸ್ಥಾಪಕ ಸುಮಂತ್ ಶೆಣೈ , ಡಿಲೈಟ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇಲ್ಲಿನ ಹಿರಿಯ ಸಾಫ್ಟ್ವೇರ್ ಇಂಜಿನಿಯರ್, ಉದ್ಯಮಿ ಶ್ರೀಮತಿ ಅರ್ಚನಾ ಎಸ್.ಎಂ, ಕೃಷಿತಂತ್ರ ಕ್ಲೋನೆಕ್ ಆಟೊಮೇಷನ್ ಸಿಸ್ಟಮ್ಸ್ ನ ಸಾಫ್ಟ್ವೇರ್ ಡೆವಲಪರ್, ಪ್ರಹರ್ಷ ಟಿ. ಪಾಲ್ಗೊಂಡಿದ್ದರು.
ಆಂತರಿಕ ಶೈಕ್ಷಣಿಕ ತೀರ್ಪುಗಾರರ ಮಂಡಳಿಯಲ್ಲಿ ಡಾ. ಗಣೇಶ್ ವಿ.ಭಟ್ ( ಇ.ಸಿ. ವಿಭಾಗ) ಡಾ.ಅಭಿಷೇಕ್ ಎಸ್. ರಾವ್ ( ಐ.ಎಸ್.ಇ) ಡಾ.ಧನಂಜಯ ಜಿ.ಎಂ. ( ಎಐಎಂಎಲ್) ಡಾ.ಅನಂತ ಕೃಷ್ಣ ಕಾಮತ್ – (ಸಿ.ಎಸ್.ಡಿ) ಅಶ್ವಿನಿ ಹೊಳ್ಳ ( ಇ.ಸಿ) ಸಹಿತ ವಿಭಾಗೀಯ ತಾಂತ್ರಿಕ ಸಂಯೋಜಕ ಪ್ರಾಧ್ಯಾಪಕರುಗಳಾದ ಚತುರ ವಿ.ಕೆ.,ಗೀತಾ ಲಕ್ಷ್ಮಿ,ಕಿರಣ್ ಅಂಕಲಕೋಟಿ,ಅಶ್ವಿನಿ ಕೆ.ಜಿ. ವಿದ್ಯಾರ್ಥಿ ಸಂಯೋಜಕ ಹಿಮಾಂಶು ಸಹಿತ ತಾಂತ್ರಿಕ ಚಟುವಟಿಕೆ ವಿಭಾಗದ ವಿದ್ಯಾರ್ಥಿ ಸದಸ್ಯರು ಸಹಕರಿಸಿದರು.

