ಮಂಗಳೂರು :ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 18ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಸೆಪ್ಟೆಂಬರ್ 17ರಂದು ಮಧ್ಯಾಹ್ನ 2.00ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸ್ವರಕುಡ್ಲ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕ ಸಮಾರಂಭ,ಪ್ರಶಸ್ತಿ ಪ್ರಧಾನ,ಅಭಿನಂದನಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮ ಜರಗಲಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಕೇಶವ ಕನಿಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

2007ರಲ್ಲಿ ಪ್ರಾರಂಭವಾದ ಈ ಒಕ್ಕೂಟವು ಸುಮಾರು 350ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ನೋಂದಾಯಿತ ಸಂಸ್ಥೆಯಾಗಿದೆ.ಸಂಗೀತ ಕಲಾಕ್ಷೇತ್ರದ ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು,ಕಲಾ ಸಾಧಕರಿಗೆ ಪ್ರಶಸ್ತಿ ಪ್ರಧಾನ, ಯುವಪ್ರತಿಭೆಗೆ ಅಭಿನಂದನಾ ಪುರಸ್ಕಾರ ಮತ್ತು ಸಂಗೀತ ಪ್ರತಿಭಾನ್ವೇಷಣೆ ಮುಂತಾದ ಧ್ಯೇಯಗಳಲ್ಲಿ ಮುನ್ನಡೆದು ಮತ್ತಷ್ಟು ಸಾಮಾಜಿಕ ಕಳಕಳಿಯಿಂದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ ಇವುಗಳ ಮೂಲಕ ಕರಾವಳಿಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮಗುರಿ ಮತ್ತು ಧ್ಯೇಯವಾಗಿರುತ್ತದೆ ಎಂದರು.

ನಂತರ ಮಾತನಾಡಿದ ಒಕ್ಕೂಟದ ಮಾಜಿ ಅಧ್ಯಕ್ಷ ಇಕ್ಬಾಲ್ ಕಾಟಿಪಳ್ಳ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಹೇರಂಭಾ ಇಂಡಸ್ಟ್ರೀಸ್ ಮುಂಬೈ ಇದರ ಅಧ್ಯಕ್ಷರಾದ ಕನ್ಯಾನ ಡಾ.ಸದಾಶಿವ ಶೆಟ್ಟಿ ಕುಳೂರು,ನಡೆಸಿ ಕೊಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಕೇಶವ ಕನಿಲ ನಿರ್ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಮಹೇಶ್ಕುಮಾರ್ ಡಿ.ವೈ.ಎಸ್.ಪಿ.ವಿರಾಜ್ಪೇಟೆ, ವಾಲ್ಟರ್ ನಂದಳಿಕೆ ಸ್ಥಾಪಕರು ದೈಜಿವರ್ಲ್ಡ್ ಸಮೂಹಸಂಸ್ಥೆಯ,ಲಾರೆನ್ಸ್ ಡಿಸೋಜಾ ನಿರ್ದೇಶಕರು ದೈಜಿವರ್ಲ್ಡ್ ಸಮೂಹಸಂಸ್ಥೆ, ಎಸ್.ಎಸ್.ನಾಯಕ್ ನಿರ್ದೇಶಕರು ಹಾಗೂ ನಿರೂಪಕರು ನಮ್ಮ ಕುಡ್ಲ, ಮೊಹಮ್ಮದ್ ಅಯಾಜ್ ರೈಟ್ಚಾಯ್ಸ್ ಇಂಡಸ್ಟ್ರಿಯಲ್ ಅಲ್-ಜುಬೈಲ್ ಕೆ.ಎಸ್.ಎ., ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರ್ ವಚನ ಹಾಸ್ಪಿಟಾಲಿಟಿ ಮುಂಬೈ, ನಾಗೇಂದ್ರ ಬಾಳಿಗ ಉದ್ಯಮಿ ವಿ.ಏನ್.ಆರ್. ಗೋಲ್ಡ್ ಬಂಟ್ವಾಳ, ಸತೀಶ್ಕುಮಾರ್ ಬಜಾಲ್ ಅಧ್ಯಕ್ಷರು ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯಾ, ಮಾಧವ ಬಿ.ಎಂ.ಅಧ್ಯಕ್ಷರು ಭಗವತಿ ಸಹಕಾರ ಬ್ಯಾಂಕ್ ನಿಯಮಿತ, ಕೆ.ಆಜಯಾನಂದ ಅಧ್ಯಕ್ಷರು ಕೇರಳ ತುಳು ಅಕಾಡೆಮಿ, ಜಗದೀಶ್ ಶೆಟ್ಟಿ ಬೋಳೂರು ನಿರ್ದೇಶಕರು ಸಾನಿಧ್ಯ ರೆಸಿಡೆನ್ಸಿಯಲ್ ಸ್ಕೂಲ್ ಶಕ್ತಿನಗರ,ಗಿರೀಶ್ ಆಳ್ವ ಮೊರ್ಲಾ ತೌಡಗೋಳಿ, ಪ್ರಶಾಂತ್ಲಕ್ಷ್ಮಣ್ ನಾಯಕ್ ರೀಜನಲ್ ಮ್ಯಾನೇಜರ್ ಮುತ್ತೂಟ್ ಫೈನಾನ್ಸ್ , ತುಳುನಾಡ ಕುಸಲ್ದರಸೆ ದೀಪಕ್ರೈ ಪಾಣಾಜೆ ಅಲ್ಲದೆ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ.

ಸಂಗೀತ ಕ್ಷೇತ್ರದ ಹಿರಿಯ ಕಲಾ ಸಾಧಕರಾದ ತೊನ್ಸೆ ಪುಷ್ಕಳ ಕುಮಾರ್, ಹನೀಫ್ ಪರ್ಲಿಯಾ, ಐವನ್ ಸೀಲ್ವೇರಾ ಇವರಿಗೆ “ಕರಾವಳಿ ಸಂಗೀತ ಕಲಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಸ್ವರ ಕುಡ್ಲ ಗ್ರಾಂಡ್ ಫಿನಾಲೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಂಗೀತ ರಸಮಂಜರಿ ಈ ಎಲ್ಲಾ ಕಾರ್ಯಕ್ರಮಕ್ಕೂ ಸೂಕ್ತ ಸಮಯದಲ್ಲಿ ಕಲಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಸ್ವರಕುಡ್ಲ ಸೀಸನ್ 7 ಗ್ರಾಂಡ್ಫಿನಾಲೆ ಇದರ ಪೂರ್ವಬಾವಿಯಾಗಿ ಸ್ವರಕುಡ್ಲ ಆಡಿಷನ್ ಮತ್ತು ಸೆಮಿಫೈನಲ್ ರೌಂಡ್ಸ್ ನಗರದ ಬಿಇಎಂ ಹೈಸ್ಕೂಲ್ ಕಾರ್ ಸ್ಟ್ರೀಟ್ ಮಂಗಳೂರು ಇಲ್ಲಿ ತಾರೀಕು 14ನೇ ರವಿವಾರದಂದು ಬೆಳಿಗ್ಗೆ 9.30ರಿಂದ ಮುಕ್ತ ಅವಕಾಶದೊಂದಿಗೆ ಪ್ರಾರಂಭಗೊಳ್ಳಲಿದೆ.ಸಂಗೀತ ಆಸಕ್ತರೆಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಇಕ್ಬಾಲ್ ಕಾಟಿಪಳ್ಳ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಶ್ರೀಮತಿ ಹರಿಣಿ ಉದಯ್ ,ಪ್ರಧಾನ ಕಾರ್ಯದರ್ಶಿ ಶ್ರೀ ರಾಮ್ಕುಮಾರ್ ಅಮೀನ್ , ನಿಕಟಪೂರ್ವ ಅಧ್ಯಕ್ಷರು ದೀಪಕ್ರಾಜ್ ಉಳ್ಳಾಲ್,ಮಾಜಿ ಅಧ್ಯಕ್ಷ ಮುರಳೀಧರ ಕಾಮತ್ ಹಾಜರಿದ್ದರು.

