ದುಬೈ :/ 2023 ರ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಟಿಕೆಟ್ಗಳು ಬಿಸಿ ಕೇಕ್ನಂತೆ ಮಾರಾಟವಾದರೂ,ಈ ಬಾರಿ 10 ದಿನಗಳು ಕಳೆದರೂ ಶೇಕಡಾ 50 ರಷ್ಟು ಕೂಡ ಮಾರಾಟವಾಗಿಲ್ಲ.ಭಾನುವಾರ ನಡೆಯುವ ಪಂದ್ಯಕ್ಕಾಗಿ 25,000 ಸಾಮರ್ಥ್ಯದ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಅರ್ಧದಷ್ಟು ಸ್ಟ್ಯಾಂಡ್ಗಳಲ್ಲಿ ಆಸನಗಳು ಇನ್ನೂ ಲಭ್ಯವಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳು ಯಾವಾಗಲೂ ರೋಮಾಂಚನಕಾರಿ. ಟಿಕೆಟ್ಗಳು ಬಿಸಿ ಕೇಕ್ನಂತೆ ಮಾರಾಟವಾಗುತ್ತವೆ. ಆದರೆ ವರದಿಗಳ ಪ್ರಕಾರ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಟಿಕೆಟ್ಗಳು ಇನ್ನೂ ಸಂಪೂರ್ಣವಾಗಿ ಮಾರಾಟವಾಗಿಲ್ಲ. ಭಾರತ-ಪಾಕಿಸ್ತಾನ ಏಷ್ಯಾಕಪ್ ಪಂದ್ಯವು ನಾಳೆ ದುಬೈನಲ್ಲಿ ನಡೆಯಲಿದೆ.

ಆಗಸ್ಟ್ 29ರಂದು ಟಿಕೆಟ್ ಮಾರಾಟ ಪ್ರಾರಂಭವಾಯಿತು. ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಶೇಕಡಾ 50 ರಷ್ಟು ಟಿಕೆಟ್ಗಳು ಸಹ ಮಾರಾಟವಾಗಿಲ್ಲ. ಪ್ರೀಮಿಯಂ ಸೀಟುಗಳಿಗೆ ಅತಿ ಹೆಚ್ಚು ಬೆಲೆ ನಿಗದಿ ಪಡಿಸಲಾಗಿದ್ದು 4 ಲಕ್ಷದವರೆಗೆ ಪಾವತಿಸ ಬೇಕಾಗುತ್ತದೆ.

2023ರಲ್ಲಿ ನಡೆದ ಭಾರತ- ಪಾಕಿಸ್ತಾನ ಪಂದ್ಯಾಟದ ಎಲ್ಲಾ ಟಿಕೆಟ್ಗಳು ಮಾರಾಟಕ್ಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಮಾರಾಟವಾದವು ಆದರೆ ಈ ಬಾರಿ ಮಾರಾಟದಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಭಾರತ-ಪಾಕಿಸ್ತಾನ ಪೈಪೋಟಿಯಲ್ಲಿ ಪ್ರಮುಖ ಬದಲಾವಣೆಯ ಸಂಕೇತವೆಂದು ಟಿಕೆಟ್ ಮಾರಾಟದಲ್ಲಿನ ಕುಸಿತವನ್ನು ಹಲವರು ಪರಿಗಣಿಸುತ್ತಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಭಾರತದಲ್ಲಿನ ಸಾರ್ವಜನಿಕ ಭಾವನೆಗಳು ಹಸಿಯಾಗಿಯೇ ಉಳಿದಿರುವುದರಿಂದ ಮಾರಾಟದ ನೀರಸತೆಯು ಉಂಟಾಗಿರಬಹುದು. ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಸಂಬಂಧಗಳನ್ನು ಬಹಿಷ್ಕರಿಸಬೇಕೆಂಬ ಕರೆಗಳು ಜೋರಾಗಿ ಕೇಳಿಬರುತ್ತಿವೆ, ಕೆಲವು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ಕಠಿಣ ನಿಲುವು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

