ಚೀನಾದ ಬೀದೈಹೆಯಲ್ಲಿ ನಡೆಯುತ್ತಿರುವ ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ಬರೆದ ಆನಂದ್ಕುಮಾರ್ ವೇಲ್ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. 22 ವರ್ಷದ ಆನಂದ್ಕುಮಾರ್ ವೇಲ್ಕುಮಾರ್ ಹಿರಿಯ ಪುರುಷರ 1000 ಮೀಟರ್ ಸ್ಪ್ರಿಂಟ್ನಲ್ಲಿ 1:24.924 ಸೆಕೆಂಡುಗಳಲ್ಲಿ ಚಿನ್ನ ಗೆದ್ದು ಈ ಕ್ರೀಡೆಯಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಆದರು.

2025 ರ ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಹಿರಿಯ ಪುರುಷರ 1000 ಮೀಟರ್ ಸ್ಪ್ರಿಂಟ್ನಲ್ಲಿ ಚಿನ್ನ ಗೆದ್ದ ಆನಂದಕುಮಾರ್ ವೇಲ್ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಇಂದು ‘X’ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿಯವರು ಹೀಗೆ ಹೇಳಿದರು “2025 ರ ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಹಿರಿಯ ಪುರುಷರ 1000 ಮೀಟರ್ ಸ್ಪ್ರಿಂಟ್ನಲ್ಲಿ ಚಿನ್ನ ಗೆದ್ದ ಆನಂದಕುಮಾರ್ ವೇಲ್ಕುಮಾರ್ ಬಗ್ಗೆ ಹೆಮ್ಮೆಯಿದೆ. ಅವರ ಧೈರ್ಯ, ವೇಗ ಮತ್ತು ಚೈತನ್ಯ ಅವರನ್ನು ಸ್ಕೇಟಿಂಗ್ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಿ ಮಾಡಿದೆ. ಅವರ ಸಾಧನೆಯು ಅಸಂಖ್ಯಾತ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಅವರಿಗೆ ಅಭಿನಂದನೆಗಳು ಮತ್ತು ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭಾಶಯ ಹೇಳಿದರು.

