ಮಂಗಳೂರು : ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಹೆಚ್.ಕೃಷ್ಣಮೂರ್ತಿ ನಿರ್ಮಾಣದ ಇಮ್ರಾನ್ ಪಾಷಾ, ವೈಸಿರಿ ಕೆ.ಗೌಡ, ರಕ್ಷಾರಾಮ್ ನಟನೆಯ’ ಟೈಮ್ ಪಾಸ್’ ಕನ್ನಡ ಚಲನಚಿತ್ರ ಇದೇ ಬರುವ ಅಕ್ಟೋಬರ್ 17 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕರಾದ ಚೇತನ್ ಜೋಡಿದಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಟೈಮ್ ಪಾಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡು ಒಂದಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ಅದರ ಬಗ್ಗೆಯೂ ಇದೀಗ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಮೂಡಿಕೊಂಡಿದೆ. ಹೀಗೆ ಟೀಸರ್ ಸುತ್ತಾ ಪ್ರೇಕ್ಷಕರ ಗಮನ ನೆಟ್ಟಿರುವಾಗಲೇ ಟೈಮ್ ಪಾಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ ಎಂದರು.

ನಂತರ ಮಾತನಾಡಿದ ನಟ ಇಮ್ರಾನ್ ಪಾಷಾ ಸಿನೆಮಾ ಕ್ಷೇತ್ರದೊಳಗಿನ ವಿಚಾರಗಳನ್ನೇ ಇಟ್ಟುಕೊಂಡು ಇದುವರೆಗೂ ಒಂದಷ್ಟು ಸಿನಿಮಾಗಳು ರೂಪುಗೊಂಡಿವೆ. ಇಲ್ಲಿಯೂ ಕೂಡಾ ಸಿನಿಮಾ ರಂಗದ ವಾಸ್ತವ ಕಥನ ಇದೆ ಅದರ ಒಂದಷ್ಟು ಝಲಕ್ಕುಗಳು ಈ ಟೀಸರ್ನಲ್ಲಿ ಕಾಣಿಸಿವೆ.ಈ ಚಿತ್ರವು ಡಾರ್ಕ್ ಹ್ಯೂಮರ್ ಜಾನರಿನ ಕಥೆಯನ್ನು ಹೊಂದಿದೆ. ಮನೋರಂಜನೆಯನ್ನೇ ಮುಖ್ಯ ಬಿಂದುವಾಗಿಸಿಕೊಂಡು ಈ ಕಥೆ ಮಾಡಲಾಗಿದೆ.ಅಲ್ಲದೆ ಎಲ್ಲಾ ವರ್ಗದ ಜನರಿಗೂ ಇಷ್ಟವಾಗಲಿದ್ದು ಕುಟುಂಬ ಸಮೇತ ನೋಡುವಂತಹ ಕಾಮಿಡಿ ಚಿತ್ರವಾಗಿದೆ ಎಂದರು.

ಚಿತ್ರದ ಆಡಿಯೋ ಹಕ್ಕುಗಳನ್ನು ಸರೆಗಮ ಕನ್ನಡ ಸಂಸ್ಥೆ ಪಡೆದುಕೊಂಡಿದೆ.ಅದರ ಯೂಟ್ಯೂಬ್ ಚಾನೆಲ್ನಲ್ಲಿ ಹಾಡುಗಳು ಬಿಡುಗಡೆಗೊಂಡಿವೆ.ಮ್ಯಾಕ್ಸ್ ,ಡೆವಿಲ್, ಮಾರ್ಕ್ ಮುಂತಾದ ಕನ್ನಡ ಚಿತ್ರಗಳ ಆಡಿಯೋ ಹಕ್ಕುಗಳನ್ನು ಇದೇ ಸಂಸ್ಥೆ ಪಡೆದುಕೊಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಈ ಸಂಸ್ಥೆ ಟೈಮ್ ಪಾಸ್ ಹಾಡುಗಳ ಹಕ್ಕು ಪಡೆದಿರೋದರಿಂದ ಚಿತ್ರತಂಡ ಖುಷಿಗೊಂಡಿದೆ. ಚಿತ್ರದ ಟ್ರೈಲರ್ ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ.ಅಲ್ಲದೆ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನ ಅಸುಪಾಸು ನಡೆದಿದೆ.

ಚಿತ್ರದಲ್ಲಿ ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ನಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗಿರೀಶ್ ಗೌಡ ಅವರ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಈ

