ರಾಜ್ಯದೆಲ್ಲೆಡೆ ನವರಾತ್ರಿ ಹಬ್ಬದ ಸಡಗರ ಆರಂಭವಾಗಿದ್ದು, ಬುಧವಾರದಂದು ಆಯುಧ ಪೂಜೆ ನಡೆಯಲಿದೆ. ವರ್ಷಕ್ಕೊಮ್ಮೆ ಬರುವ ಆಯುಧ ಪೂಜೆಯಂದು ಬಸ್ಗಳ ಪೂಜೆ ಮಾಡುವುದು ವಾಡಿಕೆ. ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ವಾಹನ ಪೂಜೆ ಹಮ್ಮಿಕೊಂಡಿದೆ. ಕರ್ನಾಟಕದ ಸಂಚಾರಿ ಜೀವನಾಡಿಯಾದ ಕೆಎಸ್ಆರ್ಟಿಸಿಯಿಂದ ಆ ದಿನ ಪೂಜೆಗೆ ಅತ್ಯಂತ ಕಡಿಮೆ ವೆಚ್ಚ ನೀಡಿದ್ದು,ಇದು ಚಾಲಕರು ಹಾಗೂ ನಿರ್ವಾಹಕರ ಬೇಸರಕ್ಕೆ ಕಾರಣವಾಗಿದೆ.

ಪೂಜೆ ವೆಚ್ಚವಾಗಿ ಒಂದು ಬಸ್ಗೆ 150 ರೂ ಮಾತ್ರ ಬಿಡುಗಡೆ ಮಾಡಿದೆ. ಹಬ್ಬದ ದಿನಗಳಲ್ಲಿ ಬೆಲೆಗಳೆಲ್ಲಾ ಗಗನಕ್ಕೇರಿರುವ ಸಂದರ್ಭದಲ್ಲಿ ಒಂದು ಮಾರು ಹೂವಿನ ಹಾರಕ್ಕೆ100 ರಿಂದ 150 ರೂ ,4 ಲಿಂಬೆ ಹಣ್ಣಿಗೆ 50ರೂ ಇದೆ. ಅಲ್ಲದೆ ಬಾಳೆದಿಂಡು, ಅಗರಬತ್ತಿ,ಪೂಜಾ ಸಾಮಾಗ್ರಿ ಬಸ್ಸಿನ ಸಿಂಗಾರಕ್ಕೆ 500 ರೂ ದಾಟಲಿದೆ. ಕೇವಲ 150 ರೂಪಾಯಿಯಲ್ಲಿ ಒಂದು ವಾಹನಕ್ಕೆ ಪೂಜೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.ಬಸ್ನ ಸಿಂಗಾರ, ಪೂಜೆಗೆ ಕೇವಲ 150 ರೂಪಾಯಿ ನೀಡಿರುವುದಕ್ಕೆ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ವಿಭಾಗೀಯ ಕಾರ್ಯಗಾರಕ್ಕೆ 2,000 ರೂಪಾಯಿ ವಿತರಣೆ ಮಾಡಲಾಗಿದೆ, ಪ್ರಾದೇಶಿಕ ಕಾರ್ಯಗಾರಕ್ಕೆ 4,000 ರೂ. ಕೊಡಲಾಗಿದೆ. ಪ್ರತಿ ಬಸ್ಗೆ 500 ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ.ಇಲ್ಲದಿದ್ದಲ್ಲಿ ಸಿಬ್ಬಂದಿಯೇ ಹಣ ಹಾಕಿ ಹಬ್ಬ ಆಚರಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

