ಜೌನ್ಪುರ : ಉತ್ತರ ಪ್ರದೇಶದ ಜೌನ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ, 75 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಮರಣದ ನಂತರ 35 ವರ್ಷದ ಮಹಿಳೆಯನ್ನು ವಿವಾಹವಾದರು, ಆದರೆ ಅವರು ತಮ್ಮ ಮದುವೆಯ ಮರುದಿನ ಬೆಳಿಗ್ಗೆ ನಿಧನರಾದರು. ಮಂಗಳವಾರ ಬೆಳಿಗ್ಗೆ ವೃದ್ಧನ ಸಾವು ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಈ ಮಧ್ಯೆ ದೆಹಲಿಯಲ್ಲಿ ವಾಸಿಸುವ ಮೃತರ ಕುಟುಂಬ ಸದಸ್ಯರು ಅಂತ್ಯಕ್ರಿಯೆಯನ್ನು ಅವರು ಬರುವವರೆಗೆ ಮುಂದೂಡಿದ್ದಾರೆ. ಗೌರಾ ಬಾದ್ಶಾಹ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಚ್ಮುಚ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಸಂಗ್ರುರಾಮ್ ಎಂದು ಗುರುತಿಸಲಾಗಿದೆ. ಸಂಗ್ರುರಾಮ್ 40 ವರ್ಷಗಳ ಹಿಂದೆ ಬೇಲಾವ್ ಗ್ರಾಮದ ಅನಾರಿ ದೇವಿಯನ್ನು ವಿವಾಹವಾದರು ಆದರೆ ದಂಪತಿಗೆ ಮಕ್ಕಳಿರಲಿಲ್ಲ.ಗ್ರಾಮದಲ್ಲಿ ಎರಡು ಎಕರೆ ಭೂಮಿ ಮತ್ತು ಮನೆ ಹೊಂದಿದ್ದ. ಆದರೆ ಸಂಗ್ರುರಾಮ್ ಅವರ ವಿಸ್ತೃತ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ಹೀಗಾಗಿ ಸಂಗ್ರು ರಾಮ್ ತಮ್ಮ ಜೀವನದಲ್ಲಿ ಒಂಟಿತನವನ್ನು ಹೋಗಲಾಡಿಸಲು ಮತ್ತೆ ಮದುವೆಯಾಗಲು ನಿರ್ಧರಿಸಿದರು. ಅವರು ಸೋಮವಾರ ಮೂರು ಮಕ್ಕಳ ತಾಯಿ ಆಗಿರುವ 35 ವರ್ಷದ ಮನ್ಭವತಿ ಅವರನ್ನು ವಿವಾಹವಾದರು.ಈಕೆಗೆ ಈ ಹಿಂದೆ ಇಮ್ಲೋ ಪಾಂಡೆಪಟ್ಟಿ ಗ್ರಾಮದಲ್ಲಿ ವಿವಾಹವಾಗಿದ್ದರು. ಅವರ ಮೊದಲ ಪತಿ ಏಳು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾದರು,ದಂಪತಿಗಳು ಮೊದಲು ಮದುವೆಯನ್ನು ನ್ಯಾಯಾಲಯದಲ್ಲಿ ನೊಂದಾಯಿಸಿಕೊಂಡರು ನಂತರ ಸ್ಥಳೀಯ ದೇವಸ್ಥಾನದಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿಯೂ ವಿವಾಹವಾದರು. ಮದುವೆ ಸಮಾರಂಭದ ಮುಂಚೆ ಗಂಡ ಹೆಂಡತಿ ನಡುವೆ ಒಪ್ಪಂದ ನಡೆದಿತ್ತು ಮನ್ಭವತಿ ತನ್ನ ಪತಿ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ತನ್ನ ಮೂವರು ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಮದುವೆಯ ಮೊದಲು ಹೇಳಿಕೊಂಡಿದ್ದೆ ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದರು.

ಮದುವೆಯ ಮೊದಲ ರಾತ್ರಿ ನಾವಿಬ್ಬರು ಸುಮಾರು ಹೊತ್ತು ಮಾತನಾಡುತ್ತಾ ಕಳೆದೆವು,ನಂತರ ಅವರು ನನ್ನ ಇಬ್ಬರು ಗಂಡು ಮಕ್ಕಳ ಜೊತೆ ಹೊರಗಡೆ ಮಲಗಿದರು. ನಾನು ಮಗಳ ಜೊತೆಗೆ ಮನೆಯೊಳಗೆ ಮಲಗಿದೆ.ಬೆಳಿಗ್ಗೆ ಅವನು ಕೋಣೆಗೆ ಬಂದು, ಮಗಳೇ, ಎದ್ದೇಳು, ತುಂಬಾ ತಡವಾಯಿತು ಎಂದು ಹೇಳಿದನು. ನಂತರ ನಾನು ಎದ್ದು ಪಾತ್ರೆ ತೊಳೆಯಲು ಪ್ರಾರಂಭಿಸಿದೆ. ಇದಾದ ನಂತರ ಅವನು 2 ಬಕೆಟ್ ನೀರು ತಂದನು. ಅವನು ನಮ್ಮೊಂದಿಗೆ ಬಹಳ ಹೊತ್ತು ಮಾತನಾಡುತ್ತಲೇ ಇದ್ದನು. ಪಾತ್ರೆಗಳನ್ನು ಎತ್ತಿಕೊಂಡು ಇಟ್ಟುಕೊಂಡನು. ನಂತರ ಹೋಗಿ ಮತ್ತೆ ಹಾಸಿಗೆಯ ಮೇಲೆ ಮಲಗಿದನು.ಆಗ ಇದ್ದಕ್ಕಿದ್ದಂತೆ ಅವನ ಕುತ್ತಿಗೆ ಬಾಗಿತ್ತು. ಬೆಳಿಗ್ಗೆ ಹೊತ್ತಿಗೆ ಅವರ ಆರೋಗ್ಯ ಹದಗೆಟ್ಟಿತು ಕೂಡಲೇ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿದೆವು ಅಲ್ಲಿ ವೈದ್ಯರು ಮ್ರತ ಪಟ್ಟಿದ್ದಾರೆ ಎಂದು ತಿಳಿಸಿದರು.

ಈ ಅಸಾಮಾನ್ಯ ಘಟನೆಯಿಂದ ಸಂಗ್ರುರಾಮ್ ಅವರ ಮನೆಯ ಹೊರಗೆ ಗ್ರಾಮಸ್ಥರ ದೊಡ್ಡ ಗುಂಪೇ ಸೇರಿದೆ. ಮದುವೆಯ ಆಚರಣೆಗಳ ಸಮಯದಲ್ಲಿ ಜೀವ ತುಂಬಿ ಕಾಣಿಸಿಕೊಂಡ ವೃದ್ಧ ವ್ಯಕ್ತಿ ಹೊಸ ಜೀವನ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಹೇಗೆ ನಿಧನರಾದರು ಎಂದು ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.

