ಮಂಗಳೂರು : ಜನಮಾನಸ ಗೌರವ ಸಮಿತಿ, ಮಂಗಳೂರು ವತಿಯಿಂದ ಅಕ್ಟೋಬರ್ 4ರಂದು ಶನಿವಾರ ಸಂಜೆ 5ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಾಡಿನ ಹೆಸರಾಂತ ಗಾಯಕ ಮತ್ತು ಸಂಗೀತ ನಿರ್ದೇಶಕ ಹಾಗೂ ನಿರರ್ಗಳವಾಗಿ 24 ಗಂಟೆ ಏಕವ್ಯಕ್ತಿ ಗಾಯನವನ್ನು ಹಾಡಿ ಗೊಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಮಾಡಿರುವ ಮೂಡುಬಿದ್ರೆ ನಿವಾಸಿಯಾದ ಯಶವಂತ ಎಂಜಿ ಅವರಿಗೆ “ಜನಮಾನಸ ಗೌರವ ” ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಜನಮಾನಸ ಗೌರವ ಸಮಿತಿ. ಮಂಗಳೂರು ಇದರ ಅಧ್ಯಕ್ಷರಾದ ಸುಶಾಂತ್ ಭಂಡಾರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಮಂಗಳಾ ಮೂಸಿಕ್ ಕ್ಲಬ್, ಸಂಗೀತ್ ಬಹಾರ್ ಕ್ಲಬ್ ಮತ್ತು ಸುಹಾನ ಸಫರ್ ಕ್ಲಬ್ ಈ ಮೂರೂ ಕ್ಲಬ್ಬುಗಳು ಒಟ್ಟು ಸೇರಿ ಜನ ಮಾನಸ ಗೌರವ ಸಮಿತಿಯನ್ನು ರಚಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದರು.

ಸಂಜೆ 5 ಗಂಟೆಗೆ ನಾಡಿನ ಪ್ರಬುದ್ಧ ಗಾಯಕರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಶಾಂತ್ ಭಂಡಾರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಯು. ಟಿ. ಖಾದರ್ ಸಭಾಪತಿಗಳು,ಕರ್ನಾಟಕ ಸರ್ಕಾರ, ಶ್ರೀ ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು,ಶ್ರೀ ಡಿ. ವೇದವ್ಯಾಸ ಕಾಮತ್ ಶಾಸಕರು, ದಕ್ಷಿಣ ವಿಧಾನ ಸಭಾ ಕ್ಷೇತ್ರ, ಮಂಗಳೂರು ,ಶ್ರೀ ಡಾ. ಭರತ್ ವೈ. ಶೆಟ್ಟಿ ಶಾಸಕರು, ಉತ್ತರ ವಿಧಾನ ಸಭಾ ಕ್ಷೇತ್ರ, ಮಂಗಳೂರು ,ಶ್ರೀ ಬಂಜಾರ ಪ್ರಕಾಶ್ ಶೆಟ್ಟಿ ಉದ್ಯಮಿಗಳು ಬಂಜಾರ ಗ್ರೂಪ್ ,ಶ್ರೀ ಕಿಶೋರ್ ಡಿ. ಶೆಟ್ಟಿ ಅಧ್ಯಕ್ಷರು, ತುಳು ನಾಟಕ ಕಲಾವಿದರ ಒಕ್ಕೂಟ, ಮಂಗಳೂರು,ಶ್ರೀ ಕೆ. ಕೆ. ನೌಶಾದ್ ,ಶಾದ್ಸ್ ಇವೆಂಟ್ & ನೆಟ್ ವರ್ಕ್ ,ಶ್ರೀ ಪ್ರವೀಣ್ ಸುವರ್ಣ ಉದ್ಯಮಿಗಳು, ಬಗಂಬಿಲ ಮಂಗಳೂರು,ಶ್ರೀ ಸುನಿಲ್ ಜೋನಸ್ ಉದ್ಯಮಿ,ಶ್ರೀ ಬಿ. ಕಿಶೋರ್ ಕುಮಾರ್ ಅಧ್ಯಕ್ಷರು, ಕಲಾ ಕ್ಷೇತ್ರ-ಕುಂದಾಪುರ ಟ್ರಸ್ಟ್, ಶ್ರೀ ಕೇಶವ ಶ್ರೀ ದುರ್ಗಾ ಕೇಟರಿಂಗ್, ಪಡೀಲ್ ,ಶ್ರೀ ಸತೀಶ್ ಹಿರಿಯ ಕೀಬೋರ್ಡ್ ವಾದಕರು.ಸುರತ್ಕಲ್ ಭಾಗವಹಿಸಲಿದ್ದಾರೆ

ಕಾರ್ಯಕ್ರಮ ನಿರ್ವಹಣೆಯನ್ನು ವಿದ್ವಾನ್ ಶ್ರೀ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ಖ್ಯಾತ ವಾಗ್ರಿಗಳು ,ಚಿಂತಕರು, ನವಾಕ್ಷರಿ ಬಾರ್ಕೂರು,ಇವರು ನಡೆಸಿಕೊಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ವಿಮಲ್ ಕೀರ್ತಿ ಜೈನ್,ಕಾರ್ಯದರ್ಶಿ ಉಮಾಕಾಂತ್ ನಾಯಕ್,ಖಜಾಂಚಿ ಮಾಧವ ಸುವರ್ಣ,ಸಂಚಾಲಕರಾದ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

