ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಆಚಾರ್ಯ ಮಠ ವಠಾರದಲ್ಲಿ 102 ವರ್ಷಗಳಿಂದ ಆಚರಿಸಲ್ಪಟ್ಟ ಇತಿಹಾಸ ಪ್ರಸಿದ್ಧ ಮಂಗಳೂರು ಶಾರದಾ ಮಹೋತ್ಸವದ 103 ನೇ ವರ್ಷ ದ ಪ್ರಯುಕ್ತ ವಿಶೇಷ ಹಾಗೂ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ದೊಂದಿಗೆ ಶುಕ್ರವಾರ ಸಂಪನ್ನ ಗೊಂಡಿತು . ನಾಲ್ಕು ದಿನಗಳ ಪರ್ಯಂತ ಶ್ರೀ ದೇವಿಯ ಮೃತಿಕಾ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ಪ್ರತಿದಿನ ಮಾತೆಯ ವಿಗ್ರಹಕ್ಕೆ ವಿಶೇಷ ಸರಸ್ವತಿ , ದುರ್ಗಾ , ಚಂಡಿಕಾ ದೇವಿ ಅಲಂಕಾರ ದೊಂದಿಗೆ ಅಲಂಕರಿಸಿ ಕೊನೆಯ ದಿನಂದಂದು ಶಾರದಾ ಮಾತೆಯ ಅಲಂಕಾರ ದಿಂದ ಶೃಂಗರಿಸಿ ಶೋಭಾಯಾತ್ರೆ ನಡೆಯಿತು . ಶೋಭಾಯಾತ್ರೆಯಲ್ಲಿ ವಿಶೇಷ ಹರಕೆಯ ಹುಲಿವೇಷಧಾರಿಗಳಿಂದ ಹುಲಿವೇಷ ನರ್ತನ ಸೇವೆ , ಕೇರಳದ ಸುಪ್ರಸಿದ್ದ ಚೆಂಡೆ ವಾದನ , ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ , ದೇವಳದ ಸ್ವಯಂಸೇವರಿಂದ ಶಾರದಾ ಮಾತೆಯ ವಿಗ್ರಹಕ್ಕೆ ಭುಜ ಸೇವೆಯೊಂದಿಗೆ ಪ್ರಾರಂಭಗೊಂಡು ಶ್ರೀ ವೆಂಕಟರಮಣ ದೇವಳದಿಂದ ಹೊರಟು ಗದ್ದೆಕೇರಿ , ನವಭಾರತ್ ವೃತ್ತ , ಡೋಂಗೇರಕೇರಿ , ನ್ಯೂ ಚಿತ್ರ ಜುಂಕ್ಷನ್ , ಲೋಯರ್ ಕಾರ್ಸ್ಟ್ರೀಟ್ , ರಥಬೀದಿ ಯಲ್ಲಿ ಶೋಭಾಯಾತ್ರೆ ನಡೆದು ಮಹಾಮಾಯ ತೀರ್ಥದಲ್ಲಿ ಜಲಸ್ತ೦ಭನ ಗೊಳಿಸಲಾಯಿತು . ಈ ಸಂದರ್ಭದಲ್ಲಿ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ . ಉಮಾನಂದ ಮಲ್ಯ , ಕಾರ್ಯದರ್ಶಿ ಅಡಿಗೆ ಬಾಲ ಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ , ಕಾಶೀನಾಥ್ ಆಚಾರ್ಯ , ಸುರೇಶ್ ಆಚಾರ್ಯ , ಜಯಂತ್ ಆಚಾರ್ಯ , ಶಾರದಾ ಮಹೋತ್ಸವ ಸಮಿತಿಯ ಜಿ . ದತ್ತಾತ್ರೆಯ ಭಟ್ , ಸುರೇಶ್ ವಿ ಕಾಮತ್ , ಸತೀಶ್ ಪ್ರಭು , ಗಣೇಶ್ ಬಾಳಿಗಾ ಶ್ರೀ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ , ಗಣೇಶ್ ಕಾಮತ್ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು . ದೇಶ , ವಿದೇಶಗಳಿಂದ ಸಹಸ್ರಾರು ಶ್ರೀ ಮಾತೆಯ ಭಜಕರು ಪಾಲ್ಗೊಂಡು ಪುನೀತರಾದರು .
ಚಿತ್ರ : ಮಂಜು ನೀರೇಶ್ವಾಲ್ಯ
Related Posts
© 2026 Mangalore Mitra. Designed by Blueline Computers.

