ಬೆಂಗಳೂರು : ಕರ್ನಾಟಕ ಸರ್ಕಾರ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದ್ದು, ಚಾರ್ಲಿ 777 ಚಿತ್ರದ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿಯವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೆ . ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಮ್ಯೂಟ್ ಚಿತ್ರದ ನಟನೆಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ರಾಜರಾಜೇಶ್ವರಿ ಕಂಬೈನ್ಸ್ ನಿರ್ಮಿಸಿ,ರಘುಕೇಶ್ ಎಂ. ನಿರ್ದೇಶಿಸಿದ ದೊಡ್ಡಹಟ್ಟಿ ಬೋರೇಗೌಡ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಪರಮವಾಹ್ ಸ್ಟುಡಿಯೋಸ್ ನಿರ್ಮಿಸಿ ಕಿರಣ್ರಾಜ್ ಕೆ. ನಿರ್ದೇಶಿಸಿದ ಚಾರ್ಲಿ 777 ಎರಡನೇ ಅತ್ಯುತ್ತಮ ಚಿತ್ರವೆಂದು ಘೋಷಿಸಲ್ಪಟ್ಟರೆ, ಹೃದಯ ಶಿವ ನಿರ್ದೇಶನದ ಬಿಸಿಲು ಕುದುರೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪುನೀತ್ ರಾಜ್ಕುಮಾರ್ ಅವರ ಯುವರತ್ನ ಚಿತ್ರವು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರಕ್ಕಾಗಿ ಪ್ರಶಸ್ತಿಯನ್ನು ಕೃಷ್ಣಮೂರ್ತಿ ಚಾಮರಂ ನಿರ್ದೇಶಿಸಿ ನಿರ್ಮಿಸಿದ ಭರತದ ಪ್ರಜೇಗಲದ ನಾವು ಪಡೆದುಕೊಂಡಿದೆ .ರತ್ನನ್ ಪ್ರಪಂಚ ಚಿತ್ರದ ಅಭಿನಯಕ್ಕಾಗಿ ಪ್ರಮೋದ್ ಮತ್ತು ಉಮಾಶ್ರೀ ಯವರು ಅತ್ಯುತ್ತಮ ಪೋಷಕ ನಟ -ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

2021 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
ಅತ್ಯುತ್ತಮ ಚಿತ್ರ: ದೊಡ್ಡಹಟ್ಟಿ ಬೋರೇಗೌಡ
ಅತ್ಯುತ್ತಮ ಎರಡನೇ ಚಿತ್ರ: 777 ಚಾರ್ಲಿ
ಅತ್ಯುತ್ತಮ ಮೂರನೇ ಚಿತ್ರ: ಬಿಸಿಲು ಕುದುರೆ
ಅತ್ಯುತ್ತಮ ಜನಪ್ರಿಯ ಚಿತ್ರ: ಯುವರತ್ನ
ಅತ್ಯುತ್ತಮ ಮಕ್ಕಳ ಚಿತ್ರ: ಕೇಕ್ (ಕಿಶೋರ್ ಮೂಡುಬಿದಿರೆ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಶಂಕರ್ ಎಚ್. ( ಬಡವ ರಾಸ್ಕಲ್)
ಅತ್ಯುತ್ತಮ ಪ್ರಾದೇಶಿಕ ಚಿತ್ರ: ನಾದ ಪೇಡ ಆಶಾ (ಕೊಡವ)
ಅತ್ಯುತ್ತಮ ನಿರ್ದೇಶಕ: ಪ್ರಕಾಶ್ ಕಾರಿಯಪ್ಪ (ನಾದ ಪೇಡ ಆಶಾ)
ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ
ಅತ್ಯುತ್ತಮ ನಟಿ: ಅರ್ಚನಾ ಜೋಯಿಸ್
ಅತ್ಯುತ್ತಮ ಪೋಷಕ ನಟ: ಪ್ರಮೋದ್ (ರತ್ನನ್ ಪ್ರಪಂಚ)
ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಕಥೆ: ಮಂಜುನಾಥ್ ಮುನಿಯಪ್ಪ (ಒಂಬತ್ತು ಸುಳ್ಳು ಕಥೆಗಳು)
ಅತ್ಯುತ್ತಮ ಚಿತ್ರಕಥೆ: ರಘು ಕೆ.ಎಂ (ದೊಡ್ಡಹಟ್ಟಿ ಬೋರೇಗೌಡ)
ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ತಾಯಿ ಕಸ್ತೂರ್ ಗಾಂಧಿ)
ಅತ್ಯುತ್ತಮ ಛಾಯಾಗ್ರಹಣ: ಭುವನೇಶ್ ಪ್ರಭು (ಅಮ್ಮೆ ಸಂಸಾರ – ಕೊಂಕಣಿ)
ಅತ್ಯುತ್ತಮ ಸಂಗೀತ ನಿರ್ದೇಶಕ: ಇಮ್ತಿಯಾಜ್ ಸುಲ್ತಾನ್ (ಬಿಸಿಲು ಕುದುರೆ)
ಅತ್ಯುತ್ತಮ ಸಂಕಲನ: ಪ್ರತೀಕ್ ಶೆಟ್ಟಿ (777 ಚಾರ್ಲಿ)
ಅತ್ಯುತ್ತಮ ಬಾಲ ನಟ: ಮಾಸ್ಟರ್ ಅತೀಶ್ ಶೆಟ್ಟಿ (ಕೇಕ್)
ಅತ್ಯುತ್ತಮ ಬಾಲನಟಿ: ಬೇಬಿ ಭೈರವಿ (ಭೈರವಿ)
ಅತ್ಯುತ್ತಮ ಕಲಾ ನಿರ್ದೇಶಕ: ರವಿ ಎಸ್ ( ಭಜರಂಗಿ 2 )
ಅತ್ಯುತ್ತಮ ಗೀತರಚನೆಕಾರ: ನಾಗಾರ್ಜುನ್ ಶರ್ಮಾ (777 ಚಾರ್ಲಿ)
ಅತ್ಯುತ್ತಮ ಹಿನ್ನೆಲೆ ಗಾಯಕ: ಅನೀಶ್ ಕೇಶವ ರಾವ್ (ಶ್ರೀ ಜಗನ್ನಾಥ ದಾಸರು)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಹನಾ ಎಂ ಭಾರದ್ವಾಜ್ (ದಂಡಿ)
ವಿಶೇಷ ತೀರ್ಪುಗಾರರ ಪ್ರಶಸ್ತಿ: ಭೈರವಿ
ಬೆಟ್ ಕಾಸ್ಟ್ಯೂಮ್ ಡಿಸೈನರ್: ಯೋಗಿ ಜಿ ರಾಜ್ (ಭಜರಂಗಿ 2)
ಅತ್ಯುತ್ತಮ ಮೇಕಪ್: ಶಿವಕುಮಾರ್ (ತಾಯಿ ಕಸ್ತೂರ್ ಗಾಂಧಿ)

