ದುಬೈ : ಹನುಮಾನ್ ಫಿಲಂಸ್ ಬ್ಯಾನರ್ನಲ್ಲಿ ತಯಾರಾಗುವ ಎಕ್ಕಸಕ್ಕ ,ಪಿಲಿಬೈಲ್ ಯಮುನಕ್ಕ,ಅಮ್ಮೆರ್ ಪೊಲೀಸ,ಇಂಗ್ಲೀಷ್ ಮುಂತಾದ ಸೂಪರ್ ಹಿಟ್ ಚಿತ್ರದ ನಿರ್ದೇಶಕ ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ತುಳು ಚಲನಚಿತ್ರದ (production No 1) ಮೂಹೂರ್ತ ಸಮಾರಂಭವು ಇತ್ತೀಚಿಗೆ ದುಬೈನಲ್ಲಿ ಯುಎಇ ಬಂಟ್ಸ್ನ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ನಡೆಯಿತು.

ಯುಎಇ ಬಂಟ್ಸ್ ನ ಮಹಾ ಪೋಷಕರಾದ ಡಾ.ಬಿ.ಆರ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉದ್ಯಮಿ ಹರೀಶ್ ಶೇರಿಗಾರ್ ಕ್ಯಾಮೆರಾಕ್ಕೆ ಚಾಲನೆ ನೀಡಿದರು.ನಂತರ ಸಿನಿಮಾದ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ದಿವಾಕರ ಶೆಟ್ಟಿ, ನಿರ್ದೇಶಕ ಕೆ.ಸೂರಜ್ ಶೆಟ್ಟಿ ,ನಾಯಕ ನಟ ಗೌತಮ್ ಬಂಗೇರ, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ, ಧೀರಜ್ ಶೆಟ್ಟಿ ,ವಿಶ್ವನಾಥ ಶೆಟ್ಟಿ, ರವಿರಾಜ್ ಶೆಟ್ಟಿ,ಪ್ರೇಮ್ ನಾಥ್ ಶೆಟ್ಟಿ, ರಾಜೇಶ್ ಕುತ್ತಾರ್ ಉಪಸ್ಥಿತರಿದ್ದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಿರ್ದೇಶಕ ಕೆ.ಸೂರಜ್ ಶೆಟ್ಟಿ ಚಿತ್ರದ ಚಿತ್ರೀಕರಣವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸುವುದಾಗಿ ಮತ್ತು ಮಂಗಳೂರು ಹಾಗೂ ದುಬೈನಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗುವುದು ಎಂದರು.ಚಿತ್ರದಲ್ಲಿ ನಾಯಕನಾಗಿ ಗೌತಮ್ ಬಂಗೇರ, ನಾಯಕಿಯಾಗಿ ವಿನ್ಸೀತಾ ದೀಯಸ್ ಹಾಗೂ ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್ ಹಾಗೂ ತುಳು ಚಿತ್ರರಂಗದ ಹಲವಾರು ಅಭಿನಯಿಸಲಿದ್ದಾರೆ ಎಂದರು.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ,

