ರಶ್ಮಿಕಾ ಮಂದಣ್ಣ ಅವರೊಂದಿಗಿನ ನಿಶ್ಚಿತಾರ್ಥದ ಒಂದು ದಿನದ ನಂತರ, ವಿಜಯ್ ದೇವರಕೊಂಡ ಪುಟ್ಟಪರ್ತಿ ಸಾಯಿಬಾಬ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ಹಿಂದಿರುಗುವಾಗ ನಟನ ಕಾರು ಅಪಘಾತಕ್ಕೀಡಾಯಿತು.

ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಕಾರು ಸೋಮವಾರ ಸಂಜೆ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಉಂಡವಳ್ಳಿಯಲ್ಲಿ ಅಪಘಾತಕ್ಕೀಡಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದಿವಂಗತ ಆಧ್ಯಾತ್ಮಿಕ ಗುರು ಶ್ರೀ ಸತ್ಯ ಸಾಯಿಬಾಬಾ ಅವರ ಜನ್ಮಸ್ಥಳವಾದ ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಹೈದರಾಬಾದ್ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 44 ರ ವರಸಿದ್ಧಿ ವಿನಾಯಕ ಕಾಟನ್ ಮಿಲ್ ಬಳಿ ಈ ಅಪಘಾತ ಸಂಭವಿಸಿದ್ದು, ನಂದಿಕೂರಿನಿಂದ ಪೆಬ್ಬೈರ್ಗೆ ಕುರಿಗಳನ್ನು ಸಾಗಿಸುತ್ತಿದ್ದ ಟ್ರಕ್ ಹಠಾತ್ ಬ್ರೇಕ್ ಹಾಕಿದ್ದರಿಂದ, ನಟನ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೊಲೆರೊ ಪಿಕಪ್ ಟ್ರಕ್ಗೆ ಡಿಕ್ಕಿ ಹೊಡೆದಿದ್ದು, ಅವರ ವಾಹನಕ್ಕೆ ಭಾಗಶಃ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.ಅದೃಷ್ಟವಶಾತ್,ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.ಅಪಘಾತದ ನಂತರ, ವಿಜಯ್ ದೇವರಕೊಂಡ ತನ್ನ ಸ್ನೇಹಿತನ ಕಾರನ್ನು ಹತ್ತಿ ಹೈದರಾಬಾದ್ಗೆ ಪ್ರಯಾಣ ಬೆಳೆಸಿದರು



