ಮಂಗಳೂರು : ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಶನಿವಾರ ದಿನಾಂಕ 11-10-2025 ರಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 72 ನೆಯ ಅವತರಣೋತ್ಸವ “ಅಮೃತೋತವ 2025″ನ್ನು ಶ್ರದ್ಧಾಭಕ್ತಿಯಿಂದ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಗುತ್ತದೆ ಎಂದು ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂದು ಪೂರ್ವಾಹ್ನ 8.45 ಕ್ಕೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಅಮ್ರತಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಬೆಳಗ್ಗೆ 9.00 ರಿಂದ 11.00 ಗಂಟೆಯ ತನಕ ಶ್ರೀಗುರು ಪಾದುಕಾ ಪೂಜೆ, ಸತ್ಸಂಗ,ಭಜನೆ ಮತ್ತು ಧ್ಯಾನ, 11.00 ರಿಂದ 12 ರ ತನಕ ಸಭಾ ಕಾರ್ಯಕ್ರಮ.ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ನೆರವೇರಿಸಲಿರುವರು,ಮುಖ್ಯ ಅತಿಥಿಯಾಗಿ ರಾಜ್ಯ ಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಫರೀದ್ ರವರು ಭಾಗವಹಿಸುವರು, ಶ್ರೀ ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ ಇವರು ಸಭೆಯ ಅಧ್ಯಕ್ಷತೆ ವಹಿಸಲಿರುವರು.ಗೌರವಾನ್ವಿತ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ ಸೋಜ ಮತ್ತು ಡಾ.ಯು.ಕೃಷ್ಣ ಕುಮಾರ್ ಡೀನ್ ಮತ್ತು ಡೈರೆಕರ್, ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಕ್ಯಾಂಪಸ್ ಭಾಗವಹಿಸಲಿರುವರು.

ನಂತರ ಮಾತನಾಡಿದ ವಸಂತ ಕುಮಾರ ಪೆರ್ಲರವರು ಅಮ್ಮನವರ ಮಾನವೀಯ ಸೇವಾ ಉಪಕ್ರಮದಂತೆ ಹದಿನೆಂಟು ವರ್ಷದೊಳಗಿನ ಜನ್ಮಜಾತ ಹೃದಯ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಹಲವಾರು ಜಿಲ್ಲೆಗಳ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹೃದಯ ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿ ಮಾಡಲಾಗಿದೆ.ಅಮ್ಮನವರ ಈ ಶ್ರೇಷ್ಠ ಸೇವೆಯ ಅನುಸಾರ 200 ಮಕ್ಕಳು ಶಸ್ತ್ರಚಿಕಿತ್ಸೆ ಸಹಿತ ಉನ್ನತ ಚಿಕಿತ್ಸೆಗೆ ಆಯ್ಕೆಯಾಗಿ 100 ಮಕ್ಕಳು ಈಗಾಗಲೇ ಈ ಸೇವೆಯ ಪ್ರಯೋಜನ ಪಡೆದಿರುತ್ತಾರೆ.ಆ ಪ್ರಯುಕ್ತ ಸರಳ ಕಾರ್ಯಕ್ರಮ ಹಾಗೂ ವಸ್ತ್ರದಾನ ಕಾರ್ಯಕ್ರಮ ಇರುತ್ತದೆ.

ಮಧಾಹ್ನ 12 ಗಂಟೆಗೆ ರವಿ ಅಲೆವೂರಾಯ ಮತ್ತು ತಂಡದವರಿಂದ ಯಕ್ಷಗಾನ ಬಯಲಾಟ “ಅಮೃತಮಯಿ ಮಹಾತ್ಮೆ”,1.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ.
ಸಂಜೆ 4.30 ಕ್ಕೆ ಶ್ರೀ ಚಕ್ರಪೂಜೆ ತಂತ್ರರತ್ನ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಮತ್ತು ತಂಡದಿಂದ ಜರುಗಲಿರುವುದು,
ಸಂಜೆ 6.30 ಕ್ಕೆ ಪ್ರಸಾದ ವಿತರಣೆ ನಡೆಯಲಿರುವುದು
ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರುತ್ತದೆ ಎಂದು ವಸಂತ ಕುಮಾರ್ ಪೆರ್ಲ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ CA .ಯು.ರಾಮನಾಥ್ ನಾಯಕ್, ಖಜಾಂಚಿ, ಡಾ.ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.

