ಮಂಗಳೂರು : ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ ಕಳೆದ 10 ವರ್ಷಗಳಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ ಸಂಭ್ರಮಾಚರಣೆ, ಕ್ರಿಸ್ಮಸ್ ಹಬ್ಬ ಹಾಗೂ ರಂಜಾನ್ ಹಬ್ಬಗಳನ್ನು ಸರ್ವಧರ್ಮಿಯರು ಸೇರಿಕೊಂಡು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಈ ಬಾರಿ 11ನೇ ವರ್ಷದ ಸಲುವಾಗಿ ಇದೇ ತಾ| 20-10-2025ರಂದು ಸೋಮವಾರ ನರಕಚತುರ್ದಶಿ ದಿನದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಸಭಾಭವನದಲ್ಲಿ ಸಂಜೆ ಗಂಟೆ 3:00ರಿಂದ ರಾತ್ರಿಯವರೆಗೆ ದೀಪಾವಳಿ ಹಬ್ಬದ ಅಚರಣೆಯ ಪ್ರಯುಕ್ತ, ಜಾನಪದ ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಯನ್ನು ನಡೆಸುವರೇ ಇದೀಗ ಸಕಲ ಸಿದ್ಧತೆಗಳನ್ನು ಮಾಡುವರೇ ಒಂದು ಸಮಿತಿಯನ್ನು ಕೂಡಾ ರಚಿಸಿ ಕಾರ್ಯೋನ್ಮುಖರಾಗುತ್ತಿದ್ದೇವೆ ಎಂದು ಮಾಜಿ ಕಾರ್ಪೊರೇಟರ್ ಜೆ ನಾಗೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ 10ನೇ ವರ್ಷ ಕದ್ರಿ ಪಾರ್ಕಿನ ಸ್ವರ್ಣಕಲಾ ಮಂಟಪದಲ್ಲಿ ನಡೆದ ದೀಪಾವಳಿ ಸಂಭ್ರಮಾಚರಣೆಯಲ್ಲಿ ಚಿತ್ರಕಲಾ ಸ್ಪರ್ಧೆಗೆ ಶಾಲಾ-ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳು ಭಾಗವಹಿಸಿದ್ದು, ಸುಮಾರು 250 ಗೂಡುದೀಪ ಸ್ಪರ್ಧಿಗಳು ಭಾಗವಹಿಸಿ, ಈ ಕಾರ್ಯಕ್ರಮಕ್ಕೆ ಅಪೂರ್ವವಾದ ಜನಮನ್ನಣೆ ಸಿಕ್ಕಿರುತ್ತದೆ.
ಅಂದು ಸಂಜೆ 3:30ಕ್ಕೆ ದೀಪಾವಳಿ ಸಂಭ್ರಮಾಚರಣೆಯ ಭಾವೈಕ್ಯತೆಯ ಸಂಗಮದ ಸಭಾ ಕಾರ್ಯಕ್ರಮ ಉದ್ಘಾಟಕರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಅನಂತಪದ್ಮನಾಭ ಅಸ್ರಣ್ಣನವರು ಹಾಗೂ ಇತರ ಸಾಮಾಜಿಕ ನೇತಾರರು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಇನ್ನಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಜಾನಪದ ನೃತ್ಯ ಸ್ಪರ್ಧೆ: ಶಾಲಾ ವಿದ್ಯಾರ್ಥಿಗಳಿಗೆ ಹಾಗೂ 15 ವರ್ಷಗಳ ಮೇಲ್ಪಟ್ಟ ಎಲ್ಲಾ ತಂಡಗಳಿಗೆ ಸ್ಪರ್ಧಿಸುವ ಅವಕಾಶವಿರುತ್ತದೆ. ತಾ|18ರೊಳಗೆ ತಮ್ಮ ತಂಡದ ಹೆಸರುಗಳನ್ನು ನೊಂದಾಯಿಸತಕ್ಕದ್ದು. ಸಂಪರ್ಕ ಸಂಖ್ಯೆ:ನಾಗೇಂದ್ರ ಕುಮಾರ್: 9341758428, ಪ್ರದೀಪ್ ಬೇಕಲ್ ಜಪ್ಪು :ಮೊ:9964764010 ಪ್ರಥಮ ಬಹುಮಾನ ರೂ. 10,000/-, ದ್ವಿತೀಯ ಬಹುಮಾನ ರೂ.7,000/-, ತೃತೀಯ ಬಹುಮಾನ ರೂ.5,000/- ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ಚಿತ್ರಕಲಾ ಸ್ಪರ್ಧೆ:ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಾಗವಹಿಸುವ ಅವಕಾಶವಿರುತ್ತದೆ. ನೊಂದಾವಣೆ ಅದೇ ದಿನ ಮದ್ಯಾಹ್ನ 1:30ಕ್ಕೆ ಸಂಪರ್ಕ ಸಂಖ್ಯೆ: ಆನಂದ್ ಸೋನ್ಸ್ ಮೊ: 9901184656, ಸತೀಷ್ ಪೆಂಗಲ್ ಮೊ: 9036719916, ಕು| ಪ್ರಗತಿ ಬೇಕಲ್ : ಮೊ: 9686261829, 9483435010, ಪ್ರಥಮ ಬಹುಮಾನ ರೂ. 5,000/-, ದ್ವಿತೀಯ ಬಹುಮಾನ ರೂ.3000/-, ತೃತೀಯ ಬಹುಮಾನ ರೂ.2,000/-ಹಾಗೂ 4 ಶ್ರೇಣಿಗಳಲ್ಲಿ ಸ್ಪರ್ಧೆ ನಡೆದು ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ದೀಪಾವಳಿಯ ಸಂಭ್ರಮದ ಗೂಡುದೀಪ ಸ್ಪರ್ಧೆ: ಸ್ಪರ್ಧೆಯು ಸಂಜೆ ಗಂಟೆ 5:30ಕ್ಕೆ ಪ್ರಾರಂಭವಾಗುವುದು ಹಾಗೂ ಬಂದಂತಹ ಎಲ್ಲಾ ಗೂಡುದೀಪ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಸಂಪರ್ಕ ಸಂಖ್ಯೆ: ವಿಕಾಸ್ ಶೆಟ್ಟಿ:9916021942, ಮನೀಷ್ ಬೋಳಾರ್:ಮೊ: 9845870024, ಶ್ರೀಮತಿ ಮೀನಾ ಟೆಲ್ಲಿಸ್ ಮೊ:7022436831. ಪ್ರಥಮ ಬಹುಮಾನ ರೂ. 10,000/-, ದ್ವಿತೀಯ ಬಹುಮಾನ ರೂ.5000/-, ತೃತೀಯ ಬಹುಮಾನ 3,000 ರೂ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಕೆ.ಭಾಸ್ಕರ್ ರಾವ್,ಟಿ.ಡಿ ವಿಕಾಸ್ ಶೆಟ್ಟಿ, ಜೆ.ಆನಂದ್ ಸೋನ್ಸ್,ಸತೀಶ್ ಪೆಂಗಲ್,ಇಮ್ರಾನ್ ಕುದ್ರೋಳಿ,ಮನೀಶ್ ಬೋಳೂರು,ಕು| ಪ್ರಗತಿ ಬೇಕಲ್ ಉಪಸ್ಥಿತರಿದ್ದರು.

