ಮಂಗಳೂರು: ಅಲ್ ನಜೀಂ ಉಸ್ ಸಕೀಬ್ ಪರ್ಫ್ಯೂಮ್ ಟ್ರೇಡರ್ಸ್ ಸಂಸ್ಥೆಯ ಹೊಸ ಫರ್ಫ್ಯೂಮ್ ಬ್ರಾಂಡ್ ‘ತುಝರ್ (TUZHAR)’ ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 9ರಂದು ಬೆಳಿಗ್ಗೆ ಮಂಗಳೂರು ಬೆಂದೂರ್ವೆಲ್ನ ಅಗ್ನೆಸ್ ಕಾಲೇಜಿನ ಸೇಂಟ್ ಸೆಬಾಸ್ಟಿಯನ್ ಮಿನಿ ಹಾಲ್ನಲ್ಲಿ ನಡೆಯಿತು. ಯೆನೆಪೊಯ ಡೀಮ್ಡ್ ಯೂನಿವರ್ಸಿಟಿಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ತುಝರ್ ಬ್ರಾಂಡಿನ ಫರ್ಫ್ಯೂಮನ್ನು ಲೋಕಾರ್ಪಣೆಗೊಳಿಸಿದರು.


ಈ ಸಂಧರ್ಭದಲ್ಲಿ ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮತ್ತು ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ನಂತರ ಮಾತನಾಡಿದ ನಂತರ ಮಾತನಾಡಿದ ತುಝರ್ ಸಂಸ್ಥೆಯ ಎಂಡಿ ಎಂಡಿ ಅಬ್ದುಲ್ ಹಮೀದ್ ಮಾತನಾಡಿ ನಾನು ಉಮ್ರಾ ಹೋಗಿದ್ದ ವೇಳೆ ಈ ಕನಸನ್ನು ಕಟ್ಟಿಕೊಂಡೆ ಅದು ಈಗ ನನಸಾಗಿದೆ. ಸುಗಂಧ ದ್ರವ್ಯ ಕುರಿತು ನನಗೆ ಆಸಕ್ತಿ ಶುರುವಾಯಿತು. ಮನೆಯ ಒಂದು ಸಣ್ಣ ಕೋಣೆಯನ್ನೇ ಲ್ಯಾಬ್ ಮಾಡಿಕೊಂಡು ಸುಗಂಧ ದ್ರವ್ಯ ತಯಾರಿ ಕುರಿತು ರೀಸರ್ಚ್ ಮಾಡಲು ಆರಂಭಿಸಿದೆ. ಅಲ್ಲಿಂದ 6 ತಿಂಗಳ ಕಾಲ ನಿರಂತರ ಪರಿಶ್ರಮದಿಂದ ಇಂದು ತುಝರ್ ಅನ್ನುವ ಬ್ರಾಂಡ್ ಅನ್ನು ಪ್ರಾರಂಭಿಸಿ ಲೋಕಾರ್ಪಣೆಗೊಳಿಸುತ್ತಿದ್ದೇನೆ. ಡಾ.ಯೆನೆಪೋಯ ಅಬ್ದುಲ್ ಕುಂಞ ಅವರು ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಅವರ ಸಹಾಯವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದರೆ ಖಂಡಿತ ಯಶಸ್ಸು ಸಾಧ್ಯ ತುಝರ್ ಬ್ರಾಂಡ್ ಅತ್ಯುತ್ತಮ ಬ್ರಾಂಡಿನ ಸುಗಂಧ ದ್ರವ್ಯವಾಗಿದ್ದು, ವಿಶ್ವದೆಲ್ಲೆಡೆ ಮನೆಮಾತಾಗಿದೆ. ದೇಶ- ವಿದೇಶಗಳಲ್ಲಿ ಮನೆ ಮಾತಾಗಿರುವ ಸುಗಂಧ ದ್ರವ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಈಗಾಗಲೇ ಎರಡು ಅಂತಾರಾಷ್ಟ್ರೀಯ ಬ್ರಾಂಡ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ತಯಾರು ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುವುದು. ಜೊತೆಗೆ ಮಂಗಳೂರಿನಲ್ಲಿ ಕಂಪೆನಿಯಲ್ಲಿ ಸ್ಥಾಪಿಸಿ ಇಲ್ಲಿನ ಜನತೆಗೆ ಉದ್ಯೋಗ ಒದಗಿಸಲಾಗುವುದು. ತಮ್ಮ ಕಂಪೆನಿಯ ಸ್ಟಾಲ್ಗಳನ್ನು ಹಾಕಿ ಸ್ಟಾರ್ಟ್ ಅಪ್ ಮಾಡುವವರಿಗೆ ಅವರು ಉತ್ತಮ ರೀತಿಯಲ್ಲಿ ಬೆಳೆಯಲು ಸಹಕಾರ ಮಾಡಲಾಗುವುದು ಎಂದರು.




ತುಝರ್ ಸುಗಂಧ ದ್ರವ್ಯ ಅತ್ಯಂತ ಉತ್ತಮ ರೀತಿಯ ಬ್ರಾಂಡ್ ಆಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಗ್ರಾಹಕರು ಯಾವ ರೀತಿ ಅಪೇಕ್ಷಿಸುತ್ತಾರೆ ಅದೇ ರೀತಿಯ ಪರಿಮಳದ ಪರ್ಫ್ಯೂಮ್ ತಯಾರಿಸಿಕೊಡಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದೇಶ-ವಿದೇಶಗಳಲ್ಲಿ ಭದ್ರ ನೆಲೆಯೂರುವ ಸಂಕಲ್ಪವನ್ನು ಎಂಡಿ ಅಬ್ದುಲ್ ಹಮೀದ್ ಹೇಳಿದರು.







ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಇಅಲ್ ಮುಝೈನ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಹಾಜಿ ಜಕರಿಯಾ ಜೋಕ್ಕಟ್ಟೆ, ಎಸ್ಎಂಆರ್ ಗ್ರೂಪ್ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಉದ್ಯಮಿ ರಿಯಾಜ್ ಬಾವಾ,ಹಸನಬ್ಬ ಚಾರ್ಮಾಡಿ, ಪ್ಲಾಸ್ಟಿಕ್ ಲ್ಯಾಂಡ್ ಗ್ರೂಪ್ ಅಧ್ಯಕ್ಷ ಅಸ್ಕರ್ ಅಲಿ, ಶ್ರೀ ಮಂಗಳಾದೇವಿ ದೇವಾಲಯದ ಅನುವಂಶಿಕ ಮೊಕ್ತೇಶ್ವರರು ಶ್ರೀ ಹರೀಶ್ ಐತಾಳ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಹಿ, ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯಗಳ ಮಾಜಿ ಕುಲಪತಿ ಪ್ರೊ. ಡಾ. ಅಬ್ದುಲ್ ರಹೀಮಾನ್, ಪಿ.ಸಿ. ಗ್ರೂಪ್ ಅಧ್ಯಕ್ಷ ಹಶೀರ್ ಪಿ.ಸಿ. ಹಾಗೂ ವರ್ಲ್ಡ್ವೈಡ್ ಗ್ರೂಪ್ ಅಧ್ಯಕ್ಷ ಮೊಯ್ದೀನ್ ಉಪಸ್ಥಿತರಿದ್ದರು, ಸಾಹೀಲ್ ರೈ ಕಾರ್ಯಕ್ರಮ ನಿರೂಪಿಸಿದರು.



