ಮಂಗಳೂರು : ಟ್ಯಾಕ್ಸಿ ಚಾಲಕನ ವಿರುದ್ಧ ಕೋಮುವಾದಿ ಮತ್ತು ನಿಂದನೀಯ ಹೇಳಿಕೆ ನೀಡಿದ್ದಕ್ಕಾಗಿ ನಟ ಜಯಕೃಷ್ಣನ್ ವಿರುದ್ಧ ಪ್ರಕರಣ ದಾಖಲಾಗಿದೆ .ಚಾಲಕ ಅಹ್ಮದ್ ಶಫೀಕ್ ನೀಡಿದ ದೂರಿನ ಮೇರೆಗೆ ಮಂಗಳೂರಿನ ಉರ್ವಾ ಪೊಲೀಸರು ನಟ ಜಯಕೃಷ್ಣನ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆ ಅಕ್ಟೋಬರ್ 9 ರಂದು ನಡೆದಿತ್ತು. ಆರೋಪಿಗಳು ಅಕ್ಟೋಬರ್ 9 ರಂದು ಉಬರ್ ಮತ್ತು ರಾಪಿಡೋ ಕ್ಯಾಪ್ಟನ್ ಆ್ಯಪ್ ಮೂಲಕ ಟ್ಯಾಕ್ಸಿ ಬುಕ್ ಮಾಡಿದ್ದರು. ಪಿಕಪ್ ವಿಳಾಸವನ್ನು ಮಂಗಳೂರಿನ ಬಿಜೈ ನ್ಯೂ ರೋಡ್ ಎಂದು ನೀಡಲಾಗಿತ್ತು. ಟ್ಯಾಕ್ಸಿ ಚಾಲಕ ಅಹ್ಮದ್ ಶಫೀಕ್, ಆ್ಯಪ್ ಮೂಲಕ ಅವರಿಗೆ ಪಿಕಪ್ ಸ್ಥಳವನ್ನು ದೃಢಪಡಿಸಿದರು.ಈ ಸಂಭಾಷಣೆಯ ಸಮಯದಲ್ಲಿ ಆರೋಪಿಗಳು ಅಹ್ಮದ್ ಶಫೀಕ್ ಅವರನ್ನು ಮುಸ್ಲಿಂ ಉಗ್ರಗಾಮಿ ಮತ್ತು ಭಯೋತ್ಪಾದಕ ಎಂದು ಕರೆದರು,ಅಲ್ಲದೆ ಚಾಲಕನನ್ನು ಹಿಂದಿಯಲ್ಲಿ ಭಯೋತ್ಪಾದಕ ಎಂದು ಕರೆದಿದ್ದಾನೆ. ಅಹ್ಮದ್ ಶಫೀಕ್ ಕುಟುಂಬದ ವಿರುದ್ಧ ಮಲಯಾಳಂನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ

ದೂರಿನ ಆಧಾರದ ಮೇಲೆ, ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2025 ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 352 ಮತ್ತು 353(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಘಟನೆಯ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

