ಮುಂಬೈ : ಬಿ.ಆರ್ ಚೋಪ್ರಾ ನಿರ್ದೇಶನದ ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ಕರ್ಣನ ಪಾತ್ರದಲ್ಲಿ ಮನೆಮಾತಾಗಿದ್ದ ಪಂಕಜ್ ಧೀರ್ ಅಕ್ಟೋಬರ್ 14 ರಂದು ತಡರಾತ್ರಿ ಕೊನೆಯುಸಿರೆಳೆದರು. ಪಂಕಜ್ ಧೀರ್ ಹಲವಾರು ದಿನಗಳಿಂದ ಆಸ್ಪತ್ರೆಯಲ್ಲಿದ್ದರು. ಅವರು ದೀರ್ಘಕಾಲದವರೆಗೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಮತ್ತು ಕೆಲವು ತಿಂಗಳ ಹಿಂದೆ ಅದು ಮತ್ತೆ ಉಲ್ಬಣಗೊಂಡು. ಅವರು ತೀವ್ರ ಅಸ್ವಸ್ಥರಾಗಿದ್ದರು ಮತ್ತು ಅದಕ್ಕಾಗಿ ಒಂದು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಆದರೆ ಇಂದು ತಮ್ಮ 68 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ಪಂಕಜ್ ಧೀರ್ 1956 ರಲ್ಲಿ ಪಂಜಾಬ್ನಲ್ಲಿ ಜನಿಸಿದರು. ಅವರ ತಂದೆ ಸಿ.ಎಲ್. ಧೀರ್ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಹೀಗೆ ಪಂಕಜ್ ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡರು. ಪಂಕಜ್ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಮುಂಬೈನಲ್ಲಿ ಪೂರ್ಣಗೊಳಿಸಿದರು. ನಂತರ ಅವರು ಚಲನಚಿತ್ರೋದ್ಯಮವನ್ನು ಪ್ರವೇಶಿಸಿದರು. ಅವರ ತಂದೆಯಂತೆ ನಿರ್ದೇಶಕರಾಗುವುದು ಅವರ ಗುರಿಯಾಗಿತ್ತು.ನಂತರ ಅವರು ಸಹಾಯಕ ನಿರ್ದೇಶಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.ಮುಂದೆ ಅವರಿಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಲು ಅವಕಾಶಗಳು ಸಿಕ್ಕವು. ಪಂಕಜ್ ಧೀರ್ 1983 ರಲ್ಲಿ” ಸುಖ್ ‘ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಪೋಷಕ ನಟನಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ,
1988 ರಲ್ಲಿ ತೆರೆಕಂಡ ಬಿ.ಆರ್ ಚೋಪ್ರಾ ನಿರ್ದೇಶನದ ‘ಮಹಾಭಾರತ’ ಧಾರವಾಹಿಯ ಕರ್ಣನ ಪಾತ್ರದಲ್ಲಿ ನಟಿಸಿದ ನಂತರ ಪಂಕಜ್ ಧೀರ್ ಭಾರತದಾದ್ಯಂತ ಪ್ರಸಿದ್ಧರಾದರು

ಮಹಾಭಾರತದ ನಂತರ, ಕರ್ಣನ ಪಾತ್ರದ ಅದ್ಭುತ ಯಶಸ್ಸಿನ ನಂತರ,ಪಂಕಜ್ ಧೀರ್ ದೂರದರ್ಶನದ ಅನೇಕ ಧಾರಾವಾಹಿಗಳಾದ ಚಂದ್ರಕಾಂತ, ದಿ ಗ್ರೇಟ್ ಮರಾಠಾ, ಯುಗ್ ಮತ್ತು ಬಧೋ ಬಹು ಮುಂತಾದ ಪ್ರಸಿದ್ಧ ಧಾರಾವಾಹಿಯಲ್ಲಿ ನಟಿಸಿದರು,
ಬಾಲಿವುಡ್ ಚಲನಚಿತ್ರಗಳಾದ “ಸಡಕ್,” “ಸೋಲ್ಜರ್,” ಮತ್ತು “ಬಾದ್ಶಾ” ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಕನ್ನಡದ ವಿಷ್ಣುವರ್ಧನ್ ನಟನೆಯ ವಿಷ್ಣು- ವಿಜಯ, ವಿಷ್ಣುಸೇನ,ಮತ್ತು ಬರ ಚಿತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅವರು ನಟಿಸಿದರು

